Categories: ವಿದೇಶ

ಆಮ್ಲಜನಕ ಕೊರತೆ: ಬೇಡಿಕೆಯನ್ನು ನಿಯಂತ್ರಣದಲ್ಲಿಟ್ಟುಕೊಳ್ಳಿ ಎಂದು ರಾಜ್ಯಗಳಿಗೆ ಸಲಹೆ ನೀಡಿದ ಪಿಯೂಷ್ ಗೋಯಲ್​

ಹಲಿ: ದೇಶಾದ್ಯಂತ ಕೊರೊನಾ ವೈರಸ್ ಸೋಂಕಿತರು​ ಹೆಚ್ಚುತ್ತಿರುವ ಬೆನ್ನಲ್ಲೇ ವೈದ್ಯಕೀಯ ಆಮ್ಲಜನಕದ ಕೊರತೆ ಎದುರಾಗಿದೆ. ಈ ಬಗ್ಗೆ ಹಲವು ರಾಜ್ಯಗಳು ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಿವೆ. ಈ ಮಧ್ಯೆ ವೈದ್ಯಕೀಯ ಆಮ್ಲಜನಕದ ಬೇಡಿಕೆಯನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವಂತೆ ಕೇಂದ್ರ ಸಚಿವ ಪಿಯೂಷ್​ ಗೋಯಲ್​ ರಾಜ್ಯ ಸರ್ಕಾರಗಳಿಗೆ ಸಲಹೆ ನೀಡಿದ್ದಾರೆ.

12 ರಾಜ್ಯ ಸರ್ಕಾರಗಳೊಂದಿಗೆ ಸಭೆ ವಿಸ್ತೃತ ಸಭೆ ನಡೆಸಿ, ಆಮ್ಲಜನಕ ಕೊರತೆ ಬಗ್ಗೆ ಪರಾಮರ್ಶಿಸಲಾಗಿದೆ. ಅಲ್ಲದೆ, ರಾಜ್ಯಗಳ ಅಗತ್ಯತೆಯನ್ನೂ ಕೇಳಲಾಗಿದೆ. ಒಟ್ಟು 6177 ಮೆಟ್ರಿಕ್​ ಟನ್​ ಆಕ್ಸಿಜನ್​ಗಳನ್ನು ಪೂರೈಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಈ ಮಧ್ಯೆ ರಾಜ್ಯಗಳು ಆಮ್ಲಜನಕ ಬೇಡಿಕೆಯನ್ನು ನಿಯಂತ್ರಣ ಮಾಡಬೇಕು. ಪೂರೈಕೆ ನಿರ್ವಹಣೆ ಎಷ್ಟು ಮುಖ್ಯವೋ.. ಬೇಡಿಕೆ ನಿರ್ವಹಣೆಯೂ ಅಷ್ಟೇ ಮುಖ್ಯ ಎಂದು ಪಿಯೂಷ್​ ಗೋಯಲ್ ತಿಳಿಸಿದ್ದಾರೆ.

ಕೊರೊನಾ ಕೇಸ್​ಗಳು ಹೆಚ್ಚಾದಂತೆ ದೇಶದ ಆರೋಗ್ಯ ಕ್ಷೇತ್ರಕ್ಕೆ, ಇಲ್ಲಿನ ಮೂಲಸೌಕರ್ಯಕ್ಕೆ ಸವಾಲು ಎದುರಾಗುತ್ತದೆ. ನಾವು ರಾಜ್ಯಸರ್ಕಾರಗಳೊಂದಿಗೆ ಸದಾ ಇದ್ದೇವೆ. ಆದರೆ ರಾಜ್ಯ ಸರ್ಕಾರಗಳು ಪೂರೈಕೆ ಮತ್ತು ಬೇಡಿಕೆಯ ನಿರ್ವಹಣೆ ಸರಿಯಾಗಿ ಮಾಡಬೇಕು. ಕೊವಿಡ್​ -19 ನಿಯಂತ್ರಣಕ್ಕೆ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಹೇಳಿದ್ದಾರೆ. 9 ಕೈಗಾರಿಕೆಗಳನ್ನು ಹೊರತುಪಡಿಸಿ, ಉಳಿದ ಕೈಗಾರಿಕೆಗಳಿಗೆ ಏಪ್ರಿಲ್​ 22ರಿಂದ ಆಕ್ಸಿಜನ್​ ಪೂರೈಕೆಯನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗುವುದು. ವೈದ್ಯಕೀಯ ಆಮ್ಲಜನಕವನ್ನು ಹೆಚ್ಚೆಚ್ಚು ಪೂರೈಸುವ ದೃಷ್ಟಿಯಿಂದ ಇದನ್ನು ಮಾಡಲಾಗಿದೆ ಎಂದು ಹೇಳಿದ್ದಾರೆ. ಅಲ್ಲದೆ, ಅತಿಹೆಚ್ಚಿನ ಪ್ರಮಾಣದ ಆಕ್ಸಿಜನ್ ಅಂದರೆ ಸುಮಾರು 1500 ಮೆಟ್ರಿಕ್​ ಟನ್​ಗಳಷ್ಟನ್ನು ಮಹಾರಾಷ್ಟ್ರಕ್ಕೆ ನೀಡಲಾಗುವುದು, ದೆಹಲಿಗೆ 350 ಮೆಟ್ರಿಕ್​ ಟನ್ ಮತ್ತು ಉತ್ತರ ಪ್ರದೇಶಕ್ಕೆ 800 ಮೆಟ್ರಿಕ್​ ಟನ್ ಪೂರೈಕೆ ಮಾಡುವುದಾಗಿ ಪಿಯೂಷ್ ಗೋಯಲ್ ತಿಳಿಸಿದ್ದಾರೆ.

Desk

Recent Posts

ಮೋದಿಗೆ ಯಾರೂ ಮತ ಹಾಕಬೇಡಿ ಎಂದಿದ್ದ ಶಿಕ್ಷಕ ಅರೆಸ್ಟ್

ಬಿಹಾರದ ಸರ್ಕಾರಿ ಶಾಲೆಯ ಶಿಕ್ಷಕರೊಬ್ಬರು ಮೋದಿಗೆ ಯಾರೂ ಮತ ಹಾಕಬೇಡಿ ಎಂದು ಮಕ್ಕಳಿಗೆ ಹೇಳಿದ್ದಕ್ಕೆ ಶಿಕ್ಷಕನನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ.

11 mins ago

ಮೇ 24ರಿಂದ ಮೈಸೂರಿನಲ್ಲಿ ಮಾವು, ಹಲಸು ಮೇಳ

ಪ್ರತಿವರ್ಷದಂತೆ ಈ ಬಾರಿಯೂ ಮೈಸೂರು ನಗರದಲ್ಲಿ  ಒಂದೇ ಸೂರಿನಡಿ ವಿವಿಧ ಮಾವಿನ ತಳಿಯ ಹಣ್ಣು, ಹಲಸಿನ ಹಣ್ಣಿನ ರುಚಿ ಸವಿಯಲು…

29 mins ago

ಜಿಪ್​ ಲೈನ್ ತುಂಡಾಗಿ ಬಿದ್ದು ಮಹಿಳೆ ಸಾವು

ಜಿಪ್​ ಲೈನ್ ತುಂಡಾಗಿ ಬಿದ್ದು ಮಹಿಳೆಯೊಬ್ಬರು ಸಾವನ್ನಪ್ಪಿದ ಘಟನೆ  ರಾಮನಗರ ಜಿಲ್ಲೆಯ ಹಾರೋಹಳ್ಳಿಯ ಜಂಗಲ್ ಟ್ರಯಲ್ಸ್ ರೆಸಾರ್ಟ್​ನಲ್ಲಿ ನಡೆದಿದೆ. 

56 mins ago

ಮೀನು ಹಿಡಿಯಲು ಹೋದ ಒಂದೇ ಕುಟುಂಬದ ಇಬ್ಬರು ಕೆರೆಯಲ್ಲಿ ಮುಳುಗಿ ಮೃತ್ಯು

ಮೀನು ಹಿಡಿಯಲು ಹೋದ ಒಂದೇ ಕುಟುಂಬದ ಇಬ್ಬರು ಸದ್ಯಸರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಕಾರ್ಕಳ ತಾಲೂಕಿನ ಶಿರ್ಲಾಲು ಎಂಬಲ್ಲಿ…

1 hour ago

ಪಂಜಾಬ್​​ ವಿರುದ್ಧ ಹೈದರಾಬಾದ್ ಜಯಬೇರಿ : ಪ್ಲೇ ಆಫ್​​ನಲ್ಲಿ ಆರ್​​ಸಿಬಿ ವಿರುದ್ಧ ಕಣಕ್ಕೆ

ಇಂದು ರಾಜೀವ್​ ಗಾಂಧಿ ಇಂಟರ್​ ನ್ಯಾಷನಲ್​ ಸ್ಟೇಡಿಯಮ್​ನಲ್ಲಿ ನಡೆದ ರೋಚಕ ಪಂದ್ಯದಲ್ಲಿ ಪಂಜಾಬ್​​​ ಕಿಂಗ್ಸ್​ ವಿರುದ್ಧ ಸನ್​ರೈಸರ್ಸ್​ ಹೈದರಾಬಾದ್ ಗೆದ್ದು…

2 hours ago

ಮಹಿಳೆಯ ಕಿಡ್ನಿಯಲ್ಲಿತ್ತು 300 ಕಲ್ಲು: ಬೆಚ್ಚಿಬಿದ್ದ ವೈದ್ಯರು

ವೈದ್ಯರು ಮಹಿಳೆಯೊಬ್ಬರ ಮೂತ್ರಪಿಂಡದಿಂದ 300 ಕ್ಕೂ ಹೆಚ್ಚು ಕಲ್ಲುಗಳನ್ನು ತೆಗೆದುಹಾಕಿದ್ದಾರೆ. ದೇಹದಲ್ಲಿ ನೀರಿನಾಂಶ ಕಡಿಮೆಯಾಗದಿರಲು ನೀರಿನ ಬದಲು ಪ್ರತೀ ದಿನ…

2 hours ago