Categories: ವಿದೇಶ

ಅರಬ್ಬಿಯಲ್ಲಿ ದೋಣಿಯ ಅವಶೇಷ ಪತ್ತೆ, 11 ಮೀನುಗಾರರು ನಾಪತ್ತೆ

ಪಣಜಿ, ; ಕನ್ಯಾಕುಮಾರಿಯಿಂದ ಹೊರಟಿದ್ದ ‘ಮರ್ಸಿಡಿಸ್’ ಎಂಬ ಆಳ ಸಮುದ್ರದ ಮೀನುಗಾರಿಕಾ ದೋಣಿಯ ಅವಶೇಷಗಳು ಶನಿವಾರ ಮಧ್ಯಾಹ್ನ ಅರಬ್ಬಿ ಸಮುದ್ರದಲ್ಲಿ ದೊರೆತಿದ್ದು, ಅದರಲ್ಲಿದ್ದ 11 ಮೀನುಗಾರರು ನಾಪತ್ತೆಯಾಗಿದ್ದಾರೆ.ಗೋವಾ ಕರಾವಳಿಯ 600 ನಾಟಿಕಲ್ ಮೈಲುಗಳಷ್ಟು (1,100 ಕಿ.ಮೀ.ಗಿಂತಲೂ ಹೆಚ್ಚು) ದೂರದಲ್ಲಿದೆ. ಈ ದೋಣಿಯ ಅವಶೇಷಗಳನ್ನು ಗುರುತಿಸಲಾಗಿದೆ. ದೋಣಿಯು ಯಾವುದೋ ಹಡಗಿಗೆ ಡಿಕ್ಕಿಯಾಗಿ ಅಪಘಾತಕ್ಕೊಳಗಾಗಿರುವ ಶಂಕೆ ವ್ಯಕ್ತವಾಗಿದೆ. ಕನ್ಯಾಕುಮಾರಿ ಜಿಲ್ಲೆಯ ವಲ್ಲವಿಲೈ ಕರಾವಳಿ ಗ್ರಾಮದಿಂದ ಈ ದೋಣಿಯಲ್ಲಿ ಹೊರಟಿದ್ದ 11 ಮೀನುಗಾರರ ಕುರಿತು ಈವರೆಗೂ ಯಾವುದೇ ಮಾಹಿತಿ ಲಭ್ಯವಾಗಿಲ್ಲ.
ನಾಪತ್ತೆಯಾದ ಮೀನುಗಾರರಿಗಾಗಿ ಇತರ ದೋಣಿಗಳಲ್ಲಿ ಮೀನುಗಾರರು ಕೂಡ ಶೋಧ ನಡೆಸಿದ್ದಾರೆ. ನೌಕಾಪಡೆ ಅಥವಾ ಕೋಸ್ಟ್ ಗಾರ್ಡ್ ಹಡಗು ಸಮುದ್ರದಲ್ಲಿ ಹೆಚ್ಚು ಆಳವಾದ ಸ್ಥಳವನ್ನು ತಲುಪಲು ನಾಲ್ಕೈದು ದಿನಗಳು ತೆಗೆದುಕೊಳ್ಳುವುದರಿಂದ ಮೀನುಗಾರರ ಸಂಘಗಳು ಮತ್ತು ನಾಪತ್ತೆಯಾದವರ ಸಂಬಂಧಿಕರು ಹೆಲಿಕಾಪ್ಟರ್ ಗಳನ್ನು ಬಳಸಿ ಶೋಧ ಮತ್ತು ರಕ್ಷಣಾ ಕಾರ್ಯ ನಡೆಸಬೇಕೆಂದು ಮೀನುಗಾರಿಕೆ ಇಲಾಖೆ ಅಧಿಕಾರಿಗಳು ಹಾಗೂ ರ್ಕಾರವನ್ನು ಒತ್ತಾಯಿಸಿದೆ.’ಮರ್ಸಿಡಿಸ್’ (ನೋಂದಣಿ ಸಂಖ್ಯೆ ಐಎನ್‌ಡಿ -ಟಿಎನ್ -15 – ಎಂಎಂ – 4775) ಏಪ್ರಿಲ್ 6ರಂದು ತೆಂಗಪಟ್ಟಣಂ ಬಂದರಿನಿಂದ ಹೊರಟಿತ್ತು. “ಶುಕ್ರವಾರ ಸಂಜೆಯವರೆಗೆ ಮೀನುಗಾರರು ಸುತ್ತಮುತ್ತಲಿನ ಇತರ ದೋಣಿಗಳಲ್ಲಿರುವವರೊಂದಿಗೆ ವೈರ್‌ಲೆಸ್ ಸಾಧನದ ಮೂಲಕ ಮಾತನಾಡಿದ್ದಾರೆ” ಎಂದು ತಮಿಳುನಾಡಿನ ರಾಮನಾಥಪುರಮ್ ಜಿಲ್ಲೆಯ ಮಂಡಪಮ್ ನ ಮೀನುಗಾರಿಕಾ ಸಹಾಯಕ ನಿರ್ದೇಶಕ ಜೆ.ಎಲ್ ಅಜಿತ್ ಸ್ಟಾಲಿನ್ ಹೇಳಿದ್ದಾರೆ.
ಮರ್ಸಿಡಿಸ್ ನ ಹಾನಿಗೊಳಗಾದ ಅವಶೇಷಗಳು ಕಂಡಿವೆ ಎಂದು ಶನಿವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ನಮ್ಮ ಹಳ್ಳಿಯ ‘ಪೆರಿಯನಾಯಗಿ’ ದೋಣಿಯ ಮಾಲೀಕ ಜೆನ್ಸನ್‌ರಿಂದ ಸ್ಯಾಟಲೈಟ್ ದೂರವಾಣಿ ಕರೆಯಿಂದ ನಮಗೆ ಮಾಹಿತಿ ಸಿಕ್ಕಿತು.ದೋಣಿಯ ಕ್ಯಾಬಿನ್ ತೇಲುತ್ತಿರುವಂತೆ ಕಂಡುಬಂದಿದೆ. ಮೀನುಗಾರರು, ಎಂಜಿನ್ ಮತ್ತು ಇತರ ಭಾಗಗಳು ಕಾಣೆಯಾಗಿವೆ ಎಂದು ವಲ್ಲವಿಲೈನ ದೋಣಿ ಮಾಲೀಕರ ಸಂಘದ ಅಧ್ಯಕ್ಷ ಎ ದಿಲೀಪ್ ಜೋಸ್ ತಿಳಿಸಿದ್ದಾರೆ. ಕೆಲವು ಆಧಾರ್ ಕಾರ್ಡ್ ಮತ್ತು ದೋಣಿಯ ಮುರಿದ ಭಾಗಗಳನ್ನು ಮಾತ್ರ ಗುರುತಿಸಬಹುದೆಂದು ಮೀನುಗಾರರು ದಿಲೀಪ್ ಅವರಿಗೆ ತಿಳಿಸಿದ್ದಾರೆ.
ಈ ಬಗ್ಗೆ ಶನಿವಾರವೇ‌ ಮಾಹಿತಿ ಇದ್ದು, ಈ ಬಗ್ಗೆ ಕಾರವಾರ ಕೋಸ್ಟ್ ಗಾರ್ಡ್, ಮೀನುಗಾರಿಕಾ ಇಲಾಖೆ ಹಾಗೂ ಕರಾವಳಿ ಕಾವಲು ಪಡೆ ಪೊಲೀಸರೊಂದಿಗೂ ವಿಚಾರಿಸಲಾಗಿತ್ತು. ಆದರೆ ದೋಣಿ ಮುಳುಗಿರುವ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ಅಧಿಕಾರಿಗಳು ತಳ್ಳಿ ಹಾಕಿದ್ದರು. ನಮಗೇ ಇಲ್ಲದ ಮಾಹಿತಿ ಮಾಧ್ಯಮಗಳಿಗೆ ಹೇಗೆ ಬರುತ್ತದೆ ಎಂದು ಪ್ರಶ್ನಿಸಿದ್ದರು.

Desk

Recent Posts

ಅಂಜಲಿ ಅಂಬಿಗೇರ ಕೊಲೆ ಪ್ರಕರಣ: ಹುಬ್ಬಳ್ಳಿ-ಧಾರವಾಡ ಡಿಸಿಪಿ ಪಿ ರಾಜೀವ್ ಅಮಾನತು

ಅಂಜಲಿ ಅಂಬಿಗೇರ ಕೊಲೆ  ಪ್ರಕರಣಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿ-ಧಾರವಾಡ ಡಿಸಿಪಿ ಪಿ.ರಾಜೀವ್ ಅಮಾನತು ಮಾಡಲಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ವೈಫಲ್ಯ ಹಿನ್ನೆಲೆ  ಅಮಾನತು…

4 hours ago

ಹುಬ್ಬಳ್ಳಿ ಕೊಲೆ ಪ್ರಕರಣ : ಆರೋಪಿ ಎನ್‌ಕೌಂಟರ್‌ಗೆ ಆಗ್ರಹ

ಹುಬ್ಬಳ್ಳಿಯ ವೀರಾಪುರ ಓಣಿ ನಿವಾಸಿ ಅಂಜಲಿ ಅಂಬಿಗೇರ್‌ ಕೊಲೆ ಆರೋಪಿಗೆ ಎನ್‌ಕೌಂಟರ್‌ ಮಾಡಬೇಕೆಂದು ಟೋಕರೆ ಕೋಳಿ ಸಮಾಜ ಸಂಘ ಆಗ್ರಹಿಸಿದೆ.

4 hours ago

ಗತವೈಭವ ಸಾರುವ ಅಪರೂಪದ ಸಂಗೀತ ರುದ್ರೇಶ್ವರ ದೇವಸ್ಥಾನ

ಚಾಲುಕ್ಯರ ಕಾಲದಲ್ಲಿ ಸಂಗೀತ ವಿಶ್ವವಿದ್ಯಾಲಯದ ತಾಣವಾಗಿದ್ದ ಗೋರಟಾ(ಬಿ)ದಲ್ಲಿ ಗತವೈಭವ ಸಾರುವ ಸದುದ್ದೇಶದಿಂದ ಸಂಗೀತ ರುದ್ರೇಶ್ವರರ ವಿಶಿಷ್ಟ ಮತ್ತು ಅಪರೂಪದ ದೇವಸ್ಥಾನ…

4 hours ago

ನ್ಯೂಸ್ ಕರ್ನಾಟಕ ವರದಿಗೆ ಎಚ್ಚೆತ್ತ ತಾಲ್ಲೂಕು ಆಡಳಿತ : ಗ್ರಾಮಕ್ಕೆ ತಹಶೀಲ್ದಾರ್ ಭೇಟಿ

ಸಮಸ್ಯೆ ಬಗೆಹರಿಸಿ ಇಲ್ಲದಿದ್ದರೆ ಒಂದು ತೊಟ್ಟು ವಿಷ ಕೊಡಿ ಎಂದು ಗ್ರಾಮವನ್ನೇ ತೊರೆಯಲು ಮುಂದಾಗಿದ್ದ ಗ್ರಾಮಸ್ಥರಿಗೆ ನಂಜನಗೂಡು ತಹಶೀಲ್ದಾರ್ ಶಿವಕುಮಾರ್…

5 hours ago

ಭಗವಂತ ಖೂಬಾ ಹ್ಯಾಟ್ರಿಕ್‌ ಜಯ ನಿಶ್ಚಿತ : ಶೈಲೇಂದ್ರ

ಮೂರನೇ ಸಲ ಕೇಂದ್ರ ಸಚಿವ ಭಗವಂತ ಖೂಬಾ ಅವರು ಬೀದರ್‌ ಲೋಕಸಭಾ ಕ್ಷೇತ್ರದಿಂದ ಜಯ ಗಳಿಸುವುದು ನಿಶ್ಚಿತ' ಎಂದು ಬಿಜೆಪಿ…

5 hours ago

ಭಾರತೀಯರಿಗೆ ಗುಡ್‌ ನ್ಯೂಸ್‌ : ವೀಸಾ ಇಲ್ಲದೆ ರಷ್ಯಾಕ್ಕೆ ಹೋಗುವ ಅವಕಾಶ

ವಿದೇಶಕ್ಕೆ ಸುತ್ತಬೇಕು ಎನ್ನುವ ಪ್ರವಾಸಿಗರಿಗೆ ಒಂದು ಶುಭ ಸುದ್ದಿ. ಭಾರತೀಯರು ಇನ್ನು ಶೀಘ್ರದಲ್ಲೇ ವೀಸಾ ಇಲ್ಲದೆ ರಷ್ಯಾ ಪ್ರವಾಸ ಮಾಡಬಹುದು.…

5 hours ago