News Karnataka Kannada
Friday, May 03 2024
ವಿದೇಶ

ಅಮೇರಿಕಾದ 94 ಸಾವಿರ ಮಕ್ಕಳಲ್ಲಿ ಕೋವಿಡ್‌ ಸೋಂಕು ಪತ್ತೆ

coivd 19
Photo Credit :

ವಾಷಿಂಗ್ಟನ್‌ ; ಅಮೆರಿಕಾದ ಮಕ್ಕಳಲ್ಲಿ ಕೋವಿಡ್ -19 ಪ್ರಕರಣಗಳ ಸಂಖ್ಯೆ ಆತಂಕಕಾರಿ ಪ್ರಮಾಣದಲ್ಲಿ ಹೆಚ್ಚುತ್ತಿದೆ. ಕಳೆದ ವಾರ ಸುಮಾರು 94,000 ಮಕ್ಕಳಲ್ಲಿ ವೈರಸ್ ಪತ್ತೆಯಾಗಿದೆ, ಮತ್ತು ಪ್ರಕರಣಗಳ ಸಂಖ್ಯೆಯು ನಿರಂತರವಾಗಿ ಹೆಚ್ಚಾಗುತ್ತಿದೆ ಎಂದು ವರದಿಗಳ ಮೂಲಕ ತಿಳಿದುಬಂದಿದೆ. ಅಮೇರಿಕನ್ ಅಕಾಡೆಮಿ ಆಫ್ ಪೀಡಿಯಾಟ್ರಿಕ್ಸ್ (ಎಎಪಿ) ಪ್ರಕಟಿಸಿದ ಅಧ್ಯಯನದ ಪ್ರಕಾರ, ಯು.ಎಸ್‌ನ ಮಕ್ಕಳಲ್ಲಿ ಕೋವಿಡ್ -19 ಪ್ರಕರಣಗಳು ಈಗ 15% ರಷ್ಟಿದೆ.
ಕೊರೋನಾ ವೈರಸ್ ಸೋಂಕಿತ ಮಕ್ಕಳು ಅಪರೂಪವಾಗಿ ಗಂಭೀರ ಅನಾರೋಗ್ಯ ಸಮಸ್ಯೆಯನ್ನು ಹೊಂದಿದ್ದಾರೆ, ಆಸ್ಪತ್ರೆಗೆ ಹೆಚ್ಚು ಮಂದಿ ಸೇರುತ್ತಿಲ್ಲ ಮತ್ತು ನಾವು ಕಡಿಮೆ ಸಾವಿನ ಪ್ರಕರಣಗಳನ್ನು ಗಮನಿಸಬಹುದು ಎಂದು ಅಮೇರಿಕನ್ ಅಕಾಡೆಮಿ ಆಫ್ ಪೀಡಿಯಾಟ್ರಿಕ್ಸ್ ಪ್ರಕಟಿಸಿದೆ. ಯು.ಎಸ್‌ ಡೇಟಾ ಪ್ರಕಾರ, ಕೋವಿಡ್ ರೋಗಕ್ಕೆ ತುತ್ತಾದ ಮಕ್ಕಳಲ್ಲಿ ಶೇಕಡಾ 2 ಕ್ಕಿಂತ ಕಡಿಮೆ ಮಕ್ಕಳಿಗೆ ಆಸ್ಪತ್ರೆಯ ಅಗತ್ಯವಿರುತ್ತದೆ ಹಾಗೂ ಶೇಕಡಾ 0.00-0.03ಕ್ಕಿಂತ ಕಡಿಮೆ ಸಾವಿನ ಪ್ರಕಾರಣಗಳನ್ನು ನೋಡಬಹುದು ಎಂದು ಎಎಪಿ ವರದಿ ಮಾಡಿದೆ. ಆಗಸ್ಟ್ 5 ರ ಹೊತ್ತಿಗೆ, ಸುಮಾರು 4.3 ಮಿಲಿಯನ್ ಮಕ್ಕಳು ಕೋವಿಡ್ -19 ಗೆ ಒಳಗಾಗಿದ್ದಾರೆ ಹಾಗೂ ಮಕ್ಕಳ ಪ್ರಕರಣಗಳಲ್ಲಿ ನಿರಂತರ ಏರಿಕೆಯಾಗುತ್ತಿದೆ ಎಂದು ಎಎಪಿ ವರದಿ ಮೂಲಕ ತಿಳಿದುಬಂದಿದೆ.
ಈ ಸಮಯದಲ್ಲಿ, 12 ವರ್ಷಕ್ಕಿಂತ ಮೇಲ್ಪಟ್ಟ ಸುಮಾರು 60% ಯುಎಸ್ ಮಕ್ಕಳಿಗೆ ಸಂಪೂರ್ಣವಾಗಿ ಲಸಿಕೆ ಹಾಕಲಾಗಿದೆ ಮತ್ತು ಸುಮಾರು 70% ಜನರು ಕನಿಷ್ಠ ಒಂದು ಡೋಸ್‌ ಪಡೆದಿದ್ದಾರೆ.12 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಜನರಿಗೆ ಲಸಿಕೆ ಹಾಕಲು ಫಿಜರ್ ತುರ್ತು ಬಳಕೆಯ ಅಧಿಕಾರವನ್ನು ಪಡೆದುಕೊಂಡಿದೆ; ಮಾಡರ್ನಾ ಮತ್ತು ಜಾನ್ಸೆನ್ ಲಸಿಕೆಗಳನ್ನು 18 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಜನರಿಗೆ ನೀಡಲಾಗುತ್ತಿದೆ .ಅಕ್ಟೋಬರ್‌ ತಿಂಗಳಲ್ಲಿ ಫಿಜರ್ ಲಸಿಕೆಯು 12 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಲಭ್ಯವಾಗುವ ನಿರೀಕ್ಷೆ ಇದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು