ದಿನದಿಂದ ದಿನಕ್ಕೆ ವಿಶ್ವದ ಹಲವು ರಾಷ್ಟ್ರಗಳಲ್ಲಿ ಒಮಿಕ್ರಾನ್ ಸೋಂಕು ಪ್ರಕರಣಗಳು ಹೆಚ್ಚುತ್ತಿದ್ದು, ಭಾರತದಲ್ಲಿಯೂ ಸಹ ಈಗಾಗಲೇ ಒಮಿಕ್ರಾನ್ ಪ್ರಕರಣ ಪತ್ತೆಯಾಗಿದೆ. ಹೀಗಾಗಿ ಭಾರತ ಸೇರಿದಂತೆ ಅನೇಕ ದೇಶಗಳು ಈ ರೂಪಾಂತರಿ ಹರಡುವಿಕೆ ತಡೆಗಟ್ಟಲು ಕಠಿಣ ನಿಯಗಳ ಜಾರಿಗೆ ಮುಂದಾಗಿವೆ.
ದಕ್ಷಿಣ ಆಫ್ರಿಕಾ 227, ಇಂಗ್ಲೆಂಡ್ 74, ಜರ್ಮನ್ 51, ಬೋಟ್ಸ್ವಾನ್ 21, ಬೆಲ್ಜಿಯಂ 6, ಆಸ್ಟ್ರೇಲಿಯಾ 11, ಪೋರ್ಚುಗಲ್ 13, ಇಟಲಿ 4, ಜೆಕ್ ಗಣರಾಜ್ಯ 1, ಡೆನ್ಮಾರ್ಕ್ 2, ಆಸ್ಟ್ರಿಯಾ 11, ಕೆನಡಾ 10, ಸ್ವೀಡನ್ 1, ಸ್ವಿಟ್ಜರ್ಲೆಂಡ್ 6, ಸ್ಪೇನ್ 7, ಜಪಾನ್ 2, ಫ್ರಾನ್ಸ್ 4, ಘಾನಾ 33, ದಕ್ಷಿಣ ಕೊರಿಯಾ 3, ನೈಜೀರಿಯಾ 3, ಬ್ರೆಜಿಲ್ 2, ಅಮೆರಿಕ 16, ಭಾರತದ 4 ಮಂದಿ ಸೇರಿದಂತೆ 40 ದೇಶಗಳಲ್ಲಿ ಒಮಿಕ್ರಾನ್ ಸೋಂಕು ದೃಢಪಟ್ಟಿದೆ.
ಒಮಿಕ್ರಾನ್ ತಳಿ ಮೊದಲು ಪತ್ತೆಯಾಗಿದ್ದ ದಕ್ಷಿಣ ಆಫ್ರಿಕಾದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಭಾರೀ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ನವೆಂಬರ್ 29ರಂದು 2,273 ಕೋವಿಡ್ ಪ್ರಕರಣಗಳು ದೃಢಪಟ್ಟಿತ್ತು, ಡಿಸೆಂಬರ್ 3ರ ಹೊತ್ತಿಗೆ ಈ ಸಂಖ್ಯೆ 16,055ಕ್ಕೆ ಏರಿಕೆಯಾಗಿದೆ. ಈ ಮೂಲಕ ಕಳೆದ ನಾಲ್ಕು ದಿನಗಳಲ್ಲಿ ಆರು ಪಟ್ಟು ಕೊರೋನಾ ಸೋಂಕಿತರ ಸಂಖ್ಯೆ ಏರಿಕೆಯಾಗಿದೆ.