News Karnataka Kannada
Monday, April 29 2024
ವಿದೇಶ

ಅಫ್ಘಾನ್‌ ನಾಗರಿಕ ಯೋಧರ ಶಸ್ತ್ರ ಸಜ್ಜಿತ ಹೋರಾಟ ; 3 ಜಿಲ್ಲೆಗಳು ತಾಲಿಬಾನ್ ಮುಕ್ತ, 60 ಉಗ್ರರ ಸಾವು

Taliban
Photo Credit :

ಕಾಬೂಲ್: ಮಹತ್ವದ ಬೆಳವಣಿಗೆಯೊಂದರಲ್ಲಿ ಹಿಂಸಾಚಾರ ಪೀಡಿತ ಆಫ್ಘಾನಿಸ್ತಾನದಲ್ಲಿ ತಾಲಿಬಾನ್ ವಿರೋಧ ಬಣ ಸೃಷ್ಟಿಯಾಗಿದ್ದು, ಸ್ಥಳೀಯರ ದಿಟ್ಟ ಹೋರಾಟದ ಫಲವಾಗಿ ಮೂರು ಜಿಲ್ಲೆಗಳು ಉಗ್ರರ ಹಿಡಿತದಿಂದ ಮುಕ್ತವಾಗಿವೆ. ಈ ಸಂಘರ್ಷದಲ್ಲಿ 60 ಉಗ್ರಗಾಮಿಗಳು ಹತರಾಗಿದ್ದಾರೆ ಎಂದು ವರದಿಯಾಗಿದೆ.
ಬಾಗಲನ್ ಪ್ರಾಂತ್ಯದ ಮೂರು ಜಿಲ್ಲೆಗಳು ತಾಲಿಬಾನ್ ಕೈತಪ್ಪಿದ್ದು, ಸ್ಥಳೀಯ ಪ್ರತಿಭಟನಾಕಾರರು ಸಂಘಟಿತರಾಗುತ್ತಿದ್ದು ಮತ್ತಷ್ಟು ಮಂದಿ ಉಗ್ರರ ವಿರುದ್ಧದ ಹೋರಾಟಕ್ಕೆ ಕೈ ಜೋಡಿಸುತ್ತಿದ್ದಾರೆ. ಈ ಹೋರಾಟ ಇದೀಗ ಎಲ್ಲ ಪ್ರಾಂತ್ಯಗಳಿಗೂ ವ್ಯಾಪಿಸುವ ಸಾಧ್ಯತೆ ಇದೆ.ತಾಲಿಬಾನ್ ವಿರೋಧ ಬಣದ ದಿಟ್ಟ ಹೋರಾಟದಿಂದಾಗಿ ಕೆಲವೇ ದಿನಗಳ ಅಂತರದಲ್ಲಿ ಮೂರು ಜಿಲ್ಲೆಗಳು ಬಂಡುಕೋರರ ಕೈತಪ್ಪಿದೆ. ಖೈರ್ ಮೊಹಮದ್ ಅಂದರಾಬಿ ನೇತೃತ್ವದ ಪಬ್ಲಿಕ್ ರೆಸಿಸ್ಟೆನ್ಸ್ ಫೋರ್ಸ್ ಸಂಘಟನೆ ಸದಸ್ಯರು 60ಕ್ಕೂ ಹೆಚ್ಚು ತಾಲಿಬಾನ್ ಉಗ್ರರನ್ನು ಹೊಡೆದುರುಳಿಸಿವೆ.
ಇನ್ನೊಂದೆಡೆ ತಾಲಿಬಾನ್ ವಿರೋಧಿ ನಾಯಕ ಎಂದೇ ಖ್ಯಾತಿಪಡೆದ ಅಹಮದ್ ಶಾ ಮಸ್ಸೌದ್ ಅವರ ಪುತ್ರ ಅಹ್ಮದ್ ಮಸ್ಸೌದ್ ಕೂಡ ಪಂಜಶೀರ್ ಪ್ರಾಂತ್ಯದಲ್ಲಿ ಉಗ್ರರ ವಿರುದ್ಧ ಹೋರಾಟ ಮಾಡುತ್ತಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು