News Karnataka Kannada
Monday, April 29 2024
ವಿದೇಶ

ಅಪ್ಪನಿಗಿಂತ ಮಗನೇ ಶ್ರೀಮಂತ! ನಿತೀಶ್ ಪುತ್ರನ ಆಸ್ತಿ ಎಷ್ಟು ಗೊತ್ತಾ?

Photo Credit :

ಅಪ್ಪನಿಗಿಂತ ಮಗನೇ ಶ್ರೀಮಂತ! ನಿತೀಶ್ ಪುತ್ರನ ಆಸ್ತಿ ಎಷ್ಟು ಗೊತ್ತಾ?

ಪಟ್ನಾ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್‌ ಗಿಂತಲೂ ಅವರ ಪುತ್ರ ನಿಶಾಂತ್ ಐದು ಪಟ್ಟು ಹೆಚ್ಚು ಆಸ್ತಿಯನ್ನ ಹೊಂದುವ ಮೂಲಕ ಸುದ್ದಿಯಲ್ಲಿದ್ದಾರೆ.

ನಿಶಾಂತ್ ₹3.62 ಕೋಟಿ ಮೌಲ್ಯದ ಸ್ವತ್ತುಗಳನ್ನು ಹೊಂದಿದ್ದು, ತಂದೆ ನಿತೀಶ್ ಅವರು ₹56.5 ಲಕ್ಷ ಮೌಲ್ಯದ ಸ್ವತ್ತುಗಳನ್ನ ಹೊಂದಿದ್ದಾರೆ. ನಿತೀಶ್ ಇವರು 1989ರ ಡಿಸೆಂಬರ್‌ನಿಂದಲೂ ಕೇಂದ್ರ ಸಚಿವ ಅಥವಾ ಮುಖ್ಯಮಂತ್ರಿಯಾಗಿದ್ದಾರೆ (1990–98ರ ಅವಧಿ ಬಿಟ್ಟು).

ನಿತೀಶ್ ಮತ್ತು ಅವರ ಸಂಪುಟ ಸಹೋದ್ಯೋಗಿಗಳು ಡಿಸೆಂಬರ್ 31ರಂದು ಅವರ ಸ್ವತ್ತುಗಳ ಬಗ್ಗೆ ಮಾಹಿತಿ ಬಹಿರಂಗಪಡಿಸಿದ್ದು, 2010ರಿಂದಲು ನಿತೀಶ್ ಅವರು ತಮ್ಮ ಸ್ವತ್ತುಗಳ ವಿವರವನ್ನ ಬಹಿರಂಗ ಪಡಿಸುತ್ತಿದ್ದಾರೆ.

ಬಿಹಾರ ಮುಖ್ಯಮಂತ್ರಿಯವರ ಬಳಿ ಒಟ್ಟು ₹16.53 ಲಕ್ಷ ಚರಸ್ಥಿ ಇದ್ದರೆ, ಸುಮಾರು ₹40 ಲಕ್ಷ ಮೌಲ್ಯದ ಸ್ತಿರಾಸ್ಥಿ ಇದೆ. ಫೋರ್ಡ್‌ ವಾಹನ ಹಾಗೂ 12 ದನಗಳು ಅವರ ಒಡೆತನದಲ್ಲಿವೆ.

ಎಂಜಿನಿಯರಿಂಗ್ ಪದವಿ ಪಡೆದಿರುವ ಪುತ್ರ ನಿಶಾಂತ್ ಬಳಿ ₹1.57 ಕೋಟಿ ಮೌಲ್ಯದ ಚರಾಸ್ತಿ ಹಾಗೂ ₹1.48 ಕೋಟಿ ಮೌಲ್ಯದ ಸ್ಥಿರಾಸ್ತಿಯಿದೆ. 2016ರ ಮಾದರಿಯ ಕಾರು, ₹20 ಲಕ್ಷ ಮೌಲ್ಯದ ಆಭರಣವನ್ನ ನಿಶಾಂತ್ ಹೊಂದಿದ್ದಾರೆ. ನಿಶಾಂತ್ ಹೆಚ್ಚಿನ ಆಸ್ತಿ ದಶಕದ ಹಿಂದೆ ಮೃತಪಟ್ಟಿದ್ದ ಅವರ ತಾಯಿಯಿಂದಲೂ ಬಂದಿದೆ.

ನಿತೀಶ್ ಅವರ ಸಂಪುಟದ ಪಶುಸಂಗೋಪನಾ ಸಚಿವ, ಸಹೋದ್ಯೋಗಿ, ವಿಕಾಸ್‌ಶೀಲ್ ಇನ್ಸಾನ್ ಪಕ್ಷದ ಮುಕೇಶ್ ಸಾಹ್ನಿ ಅವರು ₹12.34 ಕೋಟಿ ಮೌಲ್ಯದ ಆಸ್ತಿ ಹೊಂದಿದ್ದು ಶ್ರೀಮಂತ ಸಚಿವರು ಎನಿಸಿದರೆ, ರಾಮ್ ಪ್ರೀತ್ ಪಾಸ್ವಾನ್ ಕೇವಲ 95 ಲಕ್ಷ ರೂಪಾಯಿ ಆಸ್ತಿ ಹೊಂದಿದ್ದು ಅತಿ ಕಡಿಮೆ ಆಸ್ತಿ ಹೊಂದಿದ ಸಚಿವ ಎನಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
204

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು