ಉತ್ತರ ಕನ್ನಡ: ಶಿರೂರು ಗುಡ್ಡ ಕುಸಿತದ ಘಟನೆಯ ಕಾರ್ಯಾಚರಣೆ ಇಂದಿಗೆ 13ನೇ ದಿನಗಳಾಗಿವೆ. ಗುಡ್ಡ ಕುಸಿದಿರುವ ಸ್ಥಳದಲ್ಲಿ ನಾಪತ್ತೆಯಾದ ಅರ್ಜುನ್, ಜಗನ್ನಾಥ್ ನಾಯ್ಕ್, ಲೋಕೇಶ್ಗಾಗಿ ತೀವ್ರ ಹುಡುಕಾಟ ನಡೆಸಿದರೂ ಪತ್ತೆಯಾಗಿಲ್ಲ. ಗಂಗಾವಳಿ ನದಿಯಲ್ಲಿ ಕಾರ್ಯಾಚರಣೆ ಮಾಡುವುದು ಭಾರೀ ಚಾಲೆಂಜ್ ಆಗಿದೆ ಎಂದು ಮುಳುಗು ತಜ್ಞ ಈಶ್ವರ್ ಮಲ್ಪೆ ಹೇಳಿದ್ದಾರೆ.
ನಾಪತ್ತೆ ಆದವರನ್ನು ಹುಡುಕುವುದು ಭಾರೀ ಕಷ್ಟವಾಗಿದೆ. 3 ಮೃತದೇಹಗಳಿಗಾಗಿ ಹುಡುಕಾಟ ಮಾಡಲಾಗುತ್ತಿದೆ. ಅದು ಗಂಗಾವಳಿ ನದಿಯಲ್ಲಿ ಕಾರ್ಯಾಚರಣೆ ಮಾಡುವುದು ಸವಾಲಿನ ಕೆಲಸವೇ ಸರಿ. ನೀರಲ್ಲಿ ಮುಳುಗಿದಾಗ ಕಣ್ಣ ಮುಂದೆ ಏನು ಕಾಣಿಸುವುದಿಲ್ಲ. ನೀರಿನ ಜೊತೆ ಮಣ್ಣು ಸೇರಿದ್ದರಿಂದ ನೀರು ತಿಳಿಯಾಗುತ್ತಿಲ್ಲ ಎಂದಿದ್ದಾರೆ. ನಿನ್ನೆ ಮೂರು ಜಾಗದಲ್ಲಿ ಹುಡುಕಾಡಿದಾಗ ಏನೂ ಕಂಡಿಲ್ಲ. ಇವತ್ತು ಮುಖ್ಯ ಪಾಯಿಂಟ್ನಲ್ಲಿ ಇಬ್ಬರು ನೀರಿನಲ್ಲಿ ಮುಳುಗಿ ಹುಡುಕಾಡಿದ್ದಾರೆ. 3 ದೇಹಗಳು ಸಿಗಬೇಕಿದೆ. ಒಟ್ಟು 8 ಜನರ ಟೀಮ್ ಸದ್ಯಕ್ಕೆ ಕಾರ್ಯಾಚರಣೆ ಮಾಡುತ್ತಿದೆ. ನಾನು ನೋಡಿದಾಗೆ ಇದು ನಮಗೆ ಸವಾಲಿನ ಕೆಲಸವಾಗಿದೆ ಎಂದು ಈಶ್ವರ್ ಮಲ್ಪೆ ಹೇಳಿದ್ದಾರೆ.

