ಉತ್ತರ ಕನ್ನಡ: ಗುಡ್ಡ ಕುಸಿತ ಪ್ರಕರಣದಲ್ಲಿ ನಾಪತ್ತೆ ಆಗಿರುವ ಅರ್ಜುನ, ಜಗನ್ನಾಥ್ ನಾಯ್ಕ, ಲೋಕೇಶ್​​ಗಾಗಿ ತೀವ್ರ ಹುಡುಕಾಟ ನಡೆಯುತ್ತಿದೆ. ನಿನ್ನೆ ಎರಡು ಪೋಕ್‌ಲೈನ್‌ಗಳು ಹುಡುಕಾಟ ನಡೆಸಿದ್ರೂ ಮೇಲೆತ್ತುವಲ್ಲಿ ವಿಫಲವಾಗಿವೆ.

ಗೋಕಾಕ್‌ನಿಂದ ಬಂದಿದ್ದ ಪೋಕ್‌ ಲೈನ್‌ ವಾಪಸ್ ತೆರಳಿವೆ. ಅಲ್ಲದೇ ಗಂಗಾವಳಿ ನದಿಯಲ್ಲಿ ನೀರಿನ ವೇಗ ಹೆಚ್ಚಾಗಿದ್ದು, ನೌಕಾದಳದ ಮುಳುಗು ತಜ್ಞರು ನೀರಿಗೆ ಇಳಿಯಲು ಹಿಂದೇಟು ಹಾಕಿದ್ದಾರೆ. ಬಳಿಕ ಉಡುಪಿಯ ಮುಳುಗು ತಜ್ಞ ಈಶ್ವರ್ ಮಲ್ಪೆ ಎಂಟ್ರಿ ಕೊಟ್ಟಿದ್ದಾರೆ. ಗಂಗಾವಳಿ ನದಿಯಲ್ಲಿ ಕಾರ್ಯಾಚರಣೆ ನಡೆಸಿದಾಗ ಸುಮಾರು 5 ಮೀಟರ್ ಆಳ, 20 ಮೀಟರ್ ದೂರದಲ್ಲಿ ಲಾರಿ ಮಾದರಿಯ ಮೆಟಲ್ ಇರೋದು ತಿಳಿದುಬಂದಿದೆ. ಹೀಗಾಗಿ ಇಂದು ಕೊನೆಯ ಬಾರಿಗೆ ಕಾರ್ಯಾಚರಣೆ ನಡೆಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.