ಉಡುಪಿ: ಯಶೋದ ಆಟೋ ಯೂನಿಯನ್ ಉಡುಪಿ ಇದರ ವತಿಯಿಂದ ನಗರದ ಮಥುರಾ ಕಂಫರ್ಟ್‌ನ ಹೊಟೇಲ್‌ನ ಸಭಾಂಗಣದಲ್ಲಿ ರಿಕ್ಷಾ ಚಾಲಕರ ಮಕ್ಕಳಿಗೆ ಉಚಿತ ನೋಟ್ ಬುಕ್ ವಿತರಿಸಲಾಯಿತು.
ಮಕ್ಕಳಿಗೆ ನೋಟ್ ಬುಕ್ ವಿತರಿಸಿ ಮಾತನಾಡಿದ ಸಂಸ್ಥೆಯ ಗೌರವಾಧ್ಯಕ್ಷ ಕೆ.ಕೃಷ್ಣಮೂರ್ತಿ ಆಚಾರ್ಯ ಅವರು, ಅತೀ ಕಷ್ಟದ ದುಡಿಮೆಯಲ್ಲಿ ಕರ್ತವ್ಯ ನಿರ್ವಹಿಸುವ ರಿಕ್ಷಾ ಚಾಲಕರ ಜೀವನ ತುಂಬಾ ಸಮಸ್ಯೆಯಿಂದ ಕೂಡಿದೆ. ಸಮಾಜವು ಅವರ ನೋವನ್ನು ಅರಿಯುವಲ್ಲಿ ವಿಫಲವಾಗಿದೆ. ಆದ್ದರಿಂದ ಯಶೋದ ಆಟೋ ಯೂನಿಯನ್ ಈ ಬಾರಿ ರಿಕ್ಷಾ ಚಾಲಕರ ಮಕ್ಕಳಿಗೆ ಉಚಿತವಾಗಿ ನೋಟ್ ಪುಸ್ತಕ ವಿತರಿಸುವ ಯೋಜನೆ ಆರಂಭಿಸಿದೆ ಎಂದರು.
ಈ ಸಂದರ್ಭದಲ್ಲಿ ಯೂನಿಯನ್‌ನ ಅಧ್ಯಕ್ಷ ಸದಾಶಿವ ಪೂಜಾರಿ, ಮಾಜಿ ಅಧ್ಯಕ್ಷರಾದ ಹರೀಶ್ ಅಮೀನ್, ಉದಯ್ ಪಂದುಬೆಟ್ಟು ಪ್ರಧಾನ ಕಾರ್ಯದರ್ಶಿ ಪ್ರವೀಣ್ ಕುಂಜಿಬೆಟ್ಟು, ಕೋಶಾಧಿಕಾರಿ ಶ್ರೀನಿವಾಸ್ ಕಪ್ಪೆಟ್ಟು, ಪ್ರವೀಣ್ ಆಚಾರ್ಯ, ನಾಗರಾಜ್ ಕಾಮತ್ ಉಪಸ್ಥಿತರಿದ್ದರು.

