ಉಡುಪಿ: ಉಡುಪಿಯ ಅಲೆವೂರಿನಲ್ಲಿ ತಡರಾತ್ರಿ ನಡೆಯುತ್ತಿದ್ದ ಯಕ್ಷಗಾನವನ್ನು ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಸ್ಥಳಕ್ಕೆ ಬಂದು ನಿಲ್ಲಿಸಿದ ಪ್ರಸಂಗ ನಡೆದಿದೆ.

ಅಲೆವೂರಿನ ಸಂಕಲ್ಪ ಸಂಭಾಂಗಣದಲ್ಲಿ ಮಧ್ಯರಾತ್ರಿ 12-30ರ ವರೆಗೆ ಯಕ್ಷಗಾನ ನಡೆಯುತ್ತಿತ್ತು. ಮಡಾಮಕ್ಕಿ ಮೇಳದವರು ಈ ಯಕ್ಷಗಾನ ಪ್ರಸಂಗ ನಡೆಸುತ್ತಿದ್ದರು.

ತಡರಾತ್ರಿಯಾದ ಕಾರಣ ಯಾರೋ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಯಕ್ಷಗಾನ ನಿಲ್ಲಿಸುವಂತೆ ಮನವಿ ಮಾಡಿದ್ದು, ಅದರಂತೆ ಯಕ್ಷಗಾನ ನಿಲ್ಲಿಸಲಾಯಿತು ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.