ಉಡುಪಿ: ವಿಶ್ವವಾಣಿ ಪತ್ರಿಕೆಯ ಸಂಪಾದಕ ವಿಶ್ವೇಶ್ವರ ಭಟ್ ಅವರಿಂದ ತಾಳಮದ್ದಳೆ ಕಲಾವಿದರ ಅವಹೇಳನ ಮಾಡಿದರು. ಪತ್ರಿಕೆಯ ಅಂಕಣದಲ್ಲಿ ಕಲಾವಿದರ ತೇಜೋವಧೆ ನಿಲ್ಲಿಸುವಂತೆ ಒತ್ತಾಯ ಹೇರಲಾಗಿದೆ.


ಮಾನಹಾನಿಕರ ಹೇಳಿಕೆಗಾಗಿ ಬಹಿರಂಗ ಕ್ಷಮೆಯಾಚಣೆಗೆ ಕಲಾವಿದರು ಆಗ್ರಹಿಸಿದ್ದಾರೆ. ಕ್ಷಮೆಯಾಚಿಸದಿದ್ದರೆ ಕಾನೂನು ಹೋರಾಟ, ಮೊಕದ್ದಮೆ ದಾಖಲಿಸಲು ನಿರ್ಧರಿಸಲಾಗಿದೆ. ಕಲಾವಿದ ಪ್ರಭಾಕರ ಜೋಶಿ ಸಹಿತ ಹಲವು ಗಣ್ಯರಿಂದ ಆಕ್ರೋಶ ವ್ಯಕ್ತವಾಗಿದೆ.

