ಉಡುಪಿ: ವಾಹನ ಮತ್ತು ವಾಣಿಜ್ಯ ಸ್ಥಳಗಳಲ್ಲಿ ಗೃಹಬಳಕೆಯ ಸಿಲಿಂಡರ್‌ಗಳನ್ನು ವ್ಯಾಪಕವಾಗಿ ಬಳಸುತ್ತಿದ್ದು, ಇದರಿಂದ ಸರ್ಕಾರಕ್ಕೆ ಕೋಟ್ಯಾಂತರ ರೂ ನಷ್ಟ ಉಂಟಾಗುತ್ತಿದೆ. ಅಲ್ಲದೆ, ಸ್ಪೋಟದ ಅಪಾಯವು ಎದುರಾಗಿದೆ ಎಂದು ನಾಗಪುರದ ಗ್ರಾಹಕ್ ದಕ್ಷತ ಕಲ್ಯಾಣ್ ಫೌಂಡೇಶನ್ ತಿಳಿಸಿದೆ.
ಈ ಬಗ್ಗೆ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ವಿಭಾಗದ ಮುಖ್ಯಸ್ಥ ಚೇತನ್ ಕುಮಾರ್ ಮಾತನಾಡಿ, ವಾಣಿಜ್ಯ ಸಿಲಿಂಡರ್‌ಗಳ ಬೆಲೆ ಶೇ. 100ರಷ್ಟು ಹೆಚ್ಚಾಗಿರುವುದರಿಂದ ವಾಣಿಜ್ಯ ಸಂಸ್ಥೆಗಳು ಗೃಹಬಳಕೆಯ ಸಿಲಿಂಡರ್‌ಗಳನ್ನು ವ್ಯಾಪಕವಾಗಿ ಬಳಸುತ್ತಿವೆ.
ಗೃಹಬಳಕೆಯ ಸಿಲಿಂಡರಿನ ಅನಿಲವನ್ನು 19 ಕೆಜಿ ವಾಣಿಜ್ಯ ಸಿಲಿಂಡರಾಗಿ ಪರಿವರ್ತಿಸಲಾಗುತ್ತಿದೆ. ಇಂತಹ ದಂಧೆ ನಡೆಸುವವರಿಗೆ ತೈಲ ಕಂಪೆನಿಗಳು ಹಾಗು ಎಲ್‌ಪಿಜಿ ವಿತರಕರು ಬೆಂಬಲ ನೀಡುತ್ತಿದ್ದು, ಇದರ ವಿರುದ್ದ ಸರಕಾರ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಅರುಣ್ ಮತ್ತು ಪ್ರಶಾಂತ್ ಉಪಸ್ಥಿತರಿದ್ದರು.

