ಉಡುಪಿ: ಉಡುಪಿ ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಮಲ್ಪೆ ಕೊಳ ಫ್ರೆಂಡ್ಸ್ ವತಿಯಿಂದ ಮಲ್ಪೆ ಬೀಚ್‌ನಲ್ಲಿ ಮೂರನೇ ವರ್ಷದ ‘ಉಡುಪಿದ ಪಿಲಿನಲಿಕೆ -2025’ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ವಿಶೇಷ ಆಹ್ವಾನಿತ ಹುಲಿವೇಷ ತಂಡಗಳು ತಾಸೆಯ ಸದ್ದಿನೊಂದಿಗೆ ಭರ್ಜರಿ ಕುಣಿದು ನೆರೆದಿದ್ದವರನ್ನು ರಂಜಿಸಿದರು. ಉಡುಪಿ ಶೈಲಿಯ ಬಣ್ಣ, ಜಟ್ಟಿ ಮತ್ತು ಟೊಪ್ಪಿಗೆ ವಿಶೇಷ ಆದ್ಯತೆ ನೀಡಲಾಗಿದ್ದ ಈ ಪ್ರದರ್ಶನದಲ್ಲಿ ಸಾಂಪ್ರದಾಯಿಕ ಶೈಲಿಯ ಹುಲಿವೇಷ ಕುಣಿತ ಎಲ್ಲರ ಗಮನ ಸೆಳೆಯಿತು.

ಕಾರ್ಯಕ್ರಮವನ್ನು ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ನ ಪ್ರವರ್ತಕ ಡಾ. ಜಿ. ಶಂಕರ್ ಉದ್ಘಾಟಿಸಿದರು. ಶಾಸಕ ಯಶ್ವಾಲ್ ಆನಂದ್ ಸುವರ್ಣ, ಮಾಜಿ ಸಚಿವರಾದ ಪ್ರಮೋದ್ ಮಧ್ವರಾಜ್, ಮಾಜಿ ಶಾಸಕ ಕೆ. ರಘುಪತಿ ಭಟ್, ಉದ್ಯಮಿಗಳಾದ ಆನಂದ್ ಸಿ. ಕುಂದರ್,

ಸಾಧು ಸಾಲಿಯಾನ್, ಕಿರಣ್ ಚಂದ್ರ ಪುಷ್ಪಗಿರಿ, ಶರತ್ ಕೆಜೆ, ಪ್ರಸಾದ್ ರಾಜ್ ಕಾಂಚನ್ ಹಾಗೂ ಉಡುಪಿ ನಗರಸಭಾ ಅಧ್ಯಕ್ಷರಾದ ಪ್ರಭಾಕರ್ ಪೂಜಾರಿ, ಉಡುಪಿ ನಗರಸಭಾ ವಿರೋಧಪಕ್ಷ ನಾಯಕರಾದ ರಮೇಶ್ ಕಾಂಚನ್, ಪಾಂಡುರಂಗ ಮಲ್ಪೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.