ಉಡುಪಿ: ಅಕ್ರಮವಾಗಿ ಜಾನುವಾರುಗಳನ್ನು ಸಾಗಾಟ ಮಾಡುತ್ತಿದ್ದ ಮೂರು ಆರೋಪಿಗಳನ್ನು ಬೈಂದೂರು ಪೊಲೀಸರು ಬಂಧಿಸಿದ್ದಾರೆ.

ಭಟ್ಕಳದ ನಿವಾಸಿ ಅಬ್ರಾರುಲ್ ಹಾಕ್ ಮೋಮಿನ್ (30), ಮೊಹಮ್ಮದ್ ಹಾಗೂ ಮೊಹಮ್ಮದ್ ಆರೀಫ್ ಬಂಧಿತ ಆರೋಪಿಗಳು. ಈ ಮೂವರು ಕೊಲ್ಲೂರು ಕಡೆಯಿಂದ ಭಟ್ಕಳ ಕಡೆಗೆ ಈಚರ್ ವಾಹನದಲ್ಲಿ ಅಕ್ರಮವಾಗಿ ಜಾನುವಾರುಗಳನ್ನು ಸಾಗಿಸುತ್ತಿದ್ದರು.

ಈ ಬಗ್ಗೆ ಖಚಿತ ಮಾಹಿತಿ ಪಡೆದು ಕಾರ್ಯಾಚರಣೆಗೆ ಇಳಿದ ಬೈಂದೂರು ಪೊಲೀಸರು, ವಾಹನವನ್ನು ತಡೆದು ಮೂವರನ್ನು ಬಂಧಿಸಿದ್ದಾರೆ. ವಾಹನದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 10 ಜಾನುವಾರಗಳನ್ನು ರಕ್ಷಿಸಲಾಗಿದೆ. ಜಾನುವಾರು ಸಾಗಾಟಕ್ಕೆ ಬೆಂಗಾವಲು ಆಗಿದ್ದ ಕಾರನ್ನು ವಶಪಡಿಕೊಳ್ಳಲಾಗಿದೆ.

