ಉಡುಪಿ: ಮುದ್ರಾ ಧಾರಣೆ ಮಾಧ್ವ ತತ್ವ ಅನುಯಾಯಿಗಳ ಅಪರೂಪದ ಆಚರಣೆ. ದೇವರ ಕೈಯಲ್ಲಿ ಕಂಗೊಳಿಸುವ ಶಂಖ ಚಕ್ರಗಳನ್ನು, ತಾವು ದೇಹದ ಮೇಲೆ ಮುದ್ರೆ ಹಾಕಿಸಿಕೊಂಡು, ದೇವರು ಮತ್ತು ಭಕ್ತ ಸಂಬಂಧವನ್ನು ಗಟ್ಟಿಗೊಳಿಸುವ ವಿಶೇಷ ಸಂಪ್ರದಾಯ.
ಪ್ರಥಮ ಏಕಾದಶಿಯಂದು ನಡೆಯುವ ಈ ಪದ್ಧತಿ, ಮಾಧ್ವ ಅನುಯಾಯಿಗಳ ಮೂಲ ಕೇಂದ್ರವಾದ ಉಡುಪಿ ಶ್ರೀ ಕೃಷ್ಣ ಮಠದಲ್ಲಿ ವೈಭವದಿಂದ ಜರಗಿತು. ಸಾವಿರಾರು ಮಂದಿ ಉಡುಪಿ ಅಷ್ಟಮಠಗಳ ಯತಿಗಳಿಂದ ತಪ್ತ ಮುದ್ರಾದಾರಣೆ ಮಾಡಿಸಿಕೊಳ್ತಾರೆ.
ಉಡುಪಿಯ ಶ್ರೀ ಕೃಷ್ಣ ಮಠದ ಭೋಜನ ಶಾಲೆಯ ಸಭಾಂಗಣದಲ್ಲಿ ಪರ್ಯಾಯ ಪುತ್ತಿಗೆ ಶ್ರೀಗಳಿಂದ ಭಕ್ತರು ಅದರಲ್ಲೂ ಪುಟ್ಟ ಪುಟ್ಟ ಮಕ್ಕಳು ಮುದ್ರಾಧಾರಣೆ ಮಾಡಿಸಿಕೊಂಡರು. ಆಚಾರ್ಯ ಮಧ್ವರು ಹಾಕಿಕೊಟ್ಟ ಪರಂಪರೆಯಂತೆ ಚಾತುರ್ಮಾಸ ಪ್ರಾರಂಭದ ಏಕಾದಶಿಯಂದು ಮಠದ ಪೀಠಾಧಿಪತಿಗಳಿಂದಲೇ ತಪ್ತಮುದ್ರಾಧಾರಣೆಯನ್ನು ಸ್ವೀಕರಿಸಬೇಕು.
ಆಷಾಡಮಾಸದ ಶುಕ್ಲ ಪಕ್ಷದ ಏಕಾದಶಿಯಂದು ಸುದರ್ಶನ ಹೋಮವನ್ನು ಆಚರಿಸಿ, ಹೋಮದ ಕೆಂಡದಲ್ಲಿ ದೇವರ ಸಂಕೇತವಾದ ಶಂಖ ಮತ್ತು ಚಕ್ರ ಮುದ್ರೆಯನ್ನು ಬಿಸಿ ಮಾಡಿ ಗುರುಗಳಿಂದ ತಪ್ತಮುದ್ರಾಧಾರಣವನ್ನು ಸ್ವೀಕರಿಸಬೇಕು.
ಆಷಾಡಮಾಸದ ಶುಕ್ಲ ಪಕ್ಷದ ಏಕಾದಶಿಯಂದು ಸುದರ್ಶನ ಹೋಮವನ್ನು ಆಚರಿಸಿ, ಹೋಮದ ಕೆಂಡದಲ್ಲಿ ದೇವರ ಸಂಕೇತವಾದ ಶಂಖ ಮತ್ತು ಚಕ್ರ ಮುದ್ರೆಯನ್ನು ಬಿಸಿ ಮಾಡಿ ಗುರುಗಳಿಂದ ತಪ್ತಮುದ್ರಾಧಾರಣವನ್ನು ಪಡೆದುಕೊಳ್ಳಲಾಗುತ್ತದೆ.

