ಉಡುಪಿ: ಮಾರಕಾಸ್ತ್ರದೊಂದಿಗೆ ಮನೆಗೆ ನುಗ್ಗಲು ಯತ್ನಿಸಿರುವ ಘಟನೆ ನಿನ್ನೆ ಮುಂಜಾನೆಯ ಹೊತ್ತಿಗೆ ಕುಂದಾಪುರ ತಾಲೂಕು ಕೋಟೇಶ್ವರದ ರಾಷ್ಟ್ರೀಯ ಹೆದ್ದಾರಿ ಬಳಿಯ ಮ್ಯಾಕ್ಸಿಮಾ ವಿಲ್ಲಾ ಮನೆಯಲ್ಲಿ ನಡೆದಿದೆ.

ಬಾಗಿಲಿನ ನೆಟ್ ಮುರಿದು ಒಳಗೆ ನುಗ್ಗಲು ಕಳ್ಳರು ಯತ್ನಿಸಿದರು. ಬಾಗಿಲು ಮುರಿಯುವ ಯತ್ನದಲ್ಲಿದ್ದಾಗ ಮನೆಯಾಕೆ ಎಚ್ಚರಗೊಂಡು ಮಹಿಳೆಯ ಬೊಬ್ಬೆ ಮತ್ತು ಫೋನ್ ಕರೆ ಮಾಡುತ್ತಿರುವುದು ಗಮನಿಸಿ ಕಳ್ಳರು ಪರಾರಿಯಾಗಿದ್ದಾರೆ.

ಘಟನಾ ಸ್ಥಳಕ್ಕೆ ಕುಂದಾಪುರದ ಪೊಲೀಸರ ಭೇಟಿ ಪರಿಶೀಲನೆ ನಡೆಸಿದರು. ಮನೆಯಲ್ಲಿ ಅಳವಡಿಸಲಾಗಿದ್ದ ಸಿಸಿ ಕ್ಯಾಮೆರಾದಲ್ಲಿ ಕಳ್ಳರ ಕೃತ್ಯ ಸೆರೆಯಾಗಿದೆ.