ಉಡುಪಿ: ಪೆಹೆಲ್ಗಾಂನಲ್ಲಿ ನೀನು ಹಿಂದುವಾ ಎಂದು ಕೇಳಿ ಹೊಡೆದಿದ್ದಾರೆ. ಕೆಟ್ಟ ಪರಂಪರೆಯನ್ನು ಭಯೋತ್ಪಾದಕರು ಹುಟ್ಟು ಹಾಕಿದ್ದಾರೆ. ದೇಶದ ನಿರ್ಧಾರ ಸಾರ್ವತ್ರಿಕವಾಗಿ ಹೇಳಿ ಮಾಡಲ್ಲ. ಎಲ್ಲವೂ ಗುಪ್ತವಾಗಿ ಕ್ರಮಗಳು ನಡೆಯುತ್ತಿರುತ್ತದೆ ಎಂದು ಉಡುಪಿ ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಹೇಳಿಕೆ ನೀಡಿದರು.

ದೇಶದ ಹಿತದೃಷ್ಟಿಯಿಂದ ಮೋದಿ ತೆಗೆದುಕೊಳ್ಳುವ ನಿರ್ಧಾರವನ್ನು ಪ್ರಪಂಚ ಸ್ವಾಗತಿಸುತ್ತದೆ. ಅದಕ್ಕೂ ಪ್ರಚಾರವನ್ನು ಬಯಸುವ ವಿದ್ಯಾಮಾನ ಮೋದಿಯ ಕಾಲಘಟ್ಟದಲ್ಲಿ ಇಲ್ಲ. ನಮ್ಮನ್ನು ಅಲ್ಲಾಹು ಕಾಪಾಡಬೇಕು ಎಂಬ ಪಾಕ್ ರಕ್ಷಣಾ ಸಚಿವರ ಹೇಳಿಕೆ ವಿಚಾರವಾಗಿ ಮಾತನಾಡಿ, ಭಾರತದ ಬಲಿಷ್ಠತೆ ನಾಯಕತ್ವ ಇಚ್ಛಾಶಕ್ತಿ ಗಮನದಲ್ಲಿಟ್ಟುಕೊಂಡು ಈ ಹೇಳಿಕೆ ಕೊಟ್ಟಿರಬಹುದು.

ಈ ಸಂದರ್ಭದಲ್ಲಿ ಯಾರಿಗೂ ನಾನು ಅಪಮಾನ ಮಾಡಲ್ಲ. ಯಾರನ್ನೂ ಹೀಗಳೆಯುವ ಅವಶ್ಯಕತೆಯಿಲ್ಲ. ಭಾರತ ಬಲಿಷ್ಠವಾಗಿದೆ ಬಹಳ ದೊಡ್ಡ ನಿರ್ಧಾರವನ್ನು ತೆಗೆದುಕೊಳ್ಳುತ್ತದೆ. ದೇಶದ ಜನರ ರಕ್ಷಣೆಗೆ ಬದ್ಧವಾಗಿರುತ್ತದೆ ಎಂಬುದು ಪಾಕ್ ಗೆ ಗೊತ್ತಾಗಿದೆ ಎಂದರು.