ಉಡುಪಿ: ರಾಜ್ಯ ರಾಜಕಾರಣದಲ್ಲಿ ಕುರ್ಚಿ ಕದನ ನಡೆಯುತ್ತಿದ್ದು, ಉಡುಪಿಯಲ್ಲಿ ಬಿಜೆಪಿ ನಾಯಕ ಸುನಿಲ್ ಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ರಾಜ್ಯದಲ್ಲಿ ಎರಡು ತಿಂಗಳಿಂದ ಆಡಳಿತ ನಡೆಯುತ್ತಿಲ್ಲ. ಶಾಸನ ಇಲ್ಲದ ದುಶ್ಯಾಸನ ಆಡಳಿತ ನಡೆಯುತ್ತಿದೆ ಎಂದರು.
ಶೇಕಡ 90 ಸಚಿವರು ವಿಧಾನಸೌಧಕ್ಕೆ ಬರುತ್ತಿಲ್ಲ, ಮುಖ್ಯಮಂತ್ರಿ ಮೈಸೂರಿಗೆ- ಡಿಸಿಎಂ ಡೆಲ್ಲಿಗೆ ಸೀಮಿತರಾಗಿದ್ದಾರೆ. ಬೆಳಗಾವಿ ಅಧಿವೇಶನದಲ್ಲಿ ಅವಿಶ್ವಾಸ ಗೊತ್ತುವಳಿ ನಿರ್ಣಯ ಮಂಡಿಸುತ್ತೇವೆ. ಈ ಸರ್ಕಾರ ಸಂಪೂರ್ಣವಾಗಿ ವಿಶ್ವಾಸ ಕಳೆದುಕೊಂಡಿದೆ. ಸಿಎಂ ಡಿಸಿಎಂ ಮಂತ್ರಿ ಶಾಸಕರ ನಡುವೆ ವಿಶ್ವಾಸವಿಲ್ಲ ಎಂದರು.
ಸದನದಲ್ಲಿ ನಾವು ವಿಶ್ವಾಸ ಮತವನ್ನು ಯಾಚಿಸುತ್ತೇವೆ. ಎಂಡಿಎ ಒಕ್ಕೂಟದಲ್ಲೂ ಕೂಡ ಈ ಬಗ್ಗೆ ಮಾತುಕತೆ ಮಾಡುತ್ತೇವೆ. ರಾಜ್ಯದ ಹಿತ ಮರೆತಿರುವ ಸರ್ಕಾರವನ್ನು ಬಯಲಿಗೆಳೆಯುತ್ತೇವೆ. ಜಾತಿ ಸಮಾಜವನ್ನು ಕಾಂಗ್ರೆಸ್ ಪಡೆದಿದೆ. ಕುರ್ಚಿಯನ್ನು ಉಳಿಸಿಕೊಳ್ಳಲು ಸ್ವಾಮೀಜಿಗಳ ಬಾಯಲ್ಲಿ ಹೇಳಿಕೆ ಕೊಡಿಸುತ್ತಿದ್ದಾರೆ ಎಂದರು.
ಗೊಂದಲದ ವಾತಾವರಣವನ್ನು ಸಿಎಂ ಡಿಸಿಎಂ ಸೃಷ್ಟಿ ಮಾಡಿದ್ದಾರೆ. ರಾಷ್ಟ್ರೀಯ ಅಧ್ಯಕ್ಷ ದಲಿತ ನಾಯಕ ಖರ್ಗೆಯನ್ನು ಕಡೆಗಣಿಸಲಾಗಿದೆ. ಸ್ವತಃ ರಾಷ್ಟ್ರೀಯ ಅಧ್ಯಕ್ಷರೇ ಹೈಕಮಾಂಡ್ ಎನ್ನುತ್ತಾರೆ. ಬಿಜೆಪಿ ಯಾವುದೇ ಕಾರಣಕ್ಕೂ ಸರ್ಕಾರ ರಚನೆ ಮಾಡಲು ಮುಂದಾಗಲ್ಲ. ಕಾಂಗ್ರೆಸ್ ತನ್ನ ಭಾರದಿಂದಲೇ ಕುಸಿದು ಬೀಳಲೆಂದು ಕಾದು ನೋಡುತ್ತಿದ್ದೇವೆ. ಡಿಸಿಎಂ ಜೊತೆ 140 ಜನ ಎಲ್ಲಿದ್ದಾರೆ. ರಾಹುಲ್ ಗಾಂಧಿ, ಸಿಎಂ ಅವರ ಜೊತೆಯಲ್ಲಿ ಇಲ್ಲ ಎಂದರು.

