ಉಡುಪಿ: ಹಿಂದೂಸ್ತಾನವಲ್ಲ, ಮುಸ್ಲಿಂಸ್ತಾನವೆನ್ನಿ ಎಂದು ಉಡುಪಿಯ ಇಂಜಿನಿಯರಿಂಗ್ ವಿದ್ಯಾರ್ಥಿನಿಯಿಂದ ದೇಶ ವಿರೋಧಿ ಬರಹ ಬರೆಯಲಾಗಿದೆ.
ಹಿಂದೂಸ್ಥಾನ್ ನಹಿ… ಮುಸ್ಲಿಂಸ್ಥಾನ ಬೋಲ್, ಮುಸ್ಲಿಂ ಜಿಂದಾಬಾದ್ ಹಿಂದೂ ಫಕ್ ಆಫ್ ಎಂದು ಗೋಡೆ ಬರಹ ಬರೆದಿರುವ ಘಟನೆ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ನಿಟ್ಟೆಯ ಇಂಜಿನಿಯರಿಂಗ್ ಕಾಲೇಜಿನ ಹಾಸ್ಟೆಲ್ ನಲ್ಲಿ ನಡೆದಿದೆ.

ಮಹಾಲಿಂಗ ಅಡ್ಯಂತ್ಯಾಯ ಮೆಮೋರಿಯಲ್ ಇಂಜಿನಿಯರಿಂಗ್ ಕಾಲೇಜಿನ ಸರೋಜಿನಿ ಹಾಸ್ಟೆಲ್ ನ ಗೋಡೆಯಲ್ಲಿ ದೇಶ ವಿರೋಧಿ ಬರಹ ಬರೆಯಲಾಗಿದ್ದು, ಬರೆದವರಿಗೆ ತೀವ್ರ ಶೋಧ ನಡೆಸಲಾಗುತ್ತಿದೆ. ಸ್ಥಳಕ್ಕೆ ಕಾರ್ಕಳ ಗ್ರಾಮಾಂತರ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

