ಉಡುಪಿ: ಕನ್ನಡದ ಪ್ರಸಿದ್ಧ ಲೇಖಕಿ ಬಾನು ಮುಸ್ತಾಕ್ ಅವರ ಕೃತಿಗೆ ಅತ್ಯುನ್ನತ ಬೂಕರ್ ಪ್ರಶಸ್ತಿ ಬಂದಿದೆ. ಮಹಿಳೆಯ ಬಗೆಗಿನ ಕಾಳಜಿಯ ಬರಹ ವಿಶ್ವ ಪ್ರಸಿದ್ಧವಾಗಲಿ. ಕನ್ನಡ ಸಾರಸ್ವತ ಲೋಕಕ್ಕೆ ಅತ್ಯಂತ ಸಂಭ್ರಮವಾಗಿದೆ ಎಂದು ಉಡುಪಿ ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಎದೆಯ ಹಣತೆ ಇಂಗ್ಲಿಷಿಗೆ ತರ್ಜುಮೆಗೊಂಡಿದೆ. ಕೃತಿ ವಿಶ್ವದ ಗಮನ ಸೆಳೆದಿದೆ. ಕನ್ನಡಕ್ಕೆ ಇದು ಬಹು ದೊಡ್ಡ ಕೊಡುಗೆ. ಬಾನು ಮುಷ್ತಾಕ್ ಲೇಖನ, ವಿಚಾರಧಾರೆಗಳು ಮಹಿಳೆಯ ಬಗೆಗಿನ ಕಾಳಜಿಯ ಬರಹಗಳಿಗೆ ಸಿಕ್ಕಿದಂತಹ ಮನ್ನಣೆ.

ಕರ್ನಾಟಕ ಮತ್ತು ಭಾರತ ದೇಶದ ಎಲ್ಲಾ ಅಭಿಮಾನಿಗಳು ಪ್ರಶಸ್ತಿಯನ್ನು ಗೌರವದಿಂದ ಸ್ವಾಗತಿಸುತ್ತೇವೆ. ಎದೆಯ ಹಣತೆ ಪುಸ್ತಕದಲ್ಲಿರುವ ವೈಚಾರಿಕ ಬರಹಗಳು ಇಡೀ ಜಗತ್ತಿನಲ್ಲಿ ವಿಜೃಂಭಿಸಲಿ. ಭಾನು ಮುಷ್ತಾಕ್ ಅವರ ಬಗ್ಗೆ ಹೆಮ್ಮೆ ಇದೆ, ನಮಗೆ ಖುಷಿ ಮತ್ತು ಸಂತೋಷವನ್ನು ಕೊಟ್ಟಿದೆ ಎಂದರು.