ಉಡುಪಿ: ಪೋಪ್ ಅಗಲುವಿಕೆ ಆಸ್ತಿಕ ಸಮಾಜಕ್ಕಾದ ಬಹುದೊಡ್ಡ ನಷ್ಟ. ಮುಂದೆ ಪೋಪ್ ಆಗಲಿರುವವರು ಈ ನಷ್ಟವನ್ನು ತುಂಬುವಂತಾಗಲಿ ಎಂದು ಕೃಷ್ಣಮಠ ಪುತ್ತಿಗೆ ಶ್ರೀ ಸುಗುಣೇಂದ್ರ ಶ್ರೀಗಳು ಹೇಳಿದ್ದಾರೆ.

ಪೋಪ್ ಅವರು ಸರ್ವಧರ್ಮ ಗೌರವ ಉಳ್ಳವರಾಗಿದ್ದರು.ನಮ್ಮನ್ನು ಎರಡು ಬಾರಿ ವ್ಯಾಟಿಕನ್ ಗೆ ಬರುವಂತೆ ಆಹ್ವಾನ ನೀಡಿದ್ದರು. ಜಾಗತಿಕ ವಿಷಯಗಳಲ್ಲಿ ಅವರ ಕೊಡುಗೆ ಅಪಾರವಾದದ್ದು.

ನಾಸ್ತಿಕತೆಯನ್ನು ಹೋಗಲಾಡಿಸಿ ಆಸ್ತಿಕತೆ ಕಾಪಾಡುವಲ್ಲಿ ಅವರ ಪಾತ್ರ ದೊಡ್ಡದು. ಅವರ ಆತ್ಮಕ್ಕೆ ಚಿರಶಾಂತಿಗಾಗಿ ಕೃಷ್ಣನಲ್ಲಿ ಪ್ರಾರ್ಥಿಸುತ್ತೇನೆ ಎಂದು ಶ್ರೀಗಳು ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.