ಉಡುಪಿ: ಕಾಂಗ್ರೆಸ್ ಹೈಕಮಾಂಡ್ ಸುರ್ಜೇವಾಲಾ ರಾಜ್ಯಭೇಟಿ ವಿಚಾರವಾಗಿ ಉಡುಪಿಯಲ್ಲಿ ಎಂ ಎಲ್ ಸಿ ಸಿಟಿ ರವಿ ಹೇಳಿಕೆ ನೀಡಿದ್ದಾರೆ. ಸುರ್ಜೇವಾಲಾ ಜನರ ಕಷ್ಟ ಕೇಳಲು ಬಂದಿದ್ದಲ್ಲ ಅವರು ಕಪ್ಪ ಕಳೋದಕ್ಕೆ ಬಂದಿದ್ದಾರೆ. ಕಪ್ಪ ಕೊಡೋದು ಕಾಂಗ್ರೆಸ್ ನ ವಾಡಿಕೆ. ಮೊಘಲರ ಆಳ್ವಿಕೆಯಲ್ಲಿ ಕಪ್ಪ ಪದ್ಧತಿ ಇತ್ತು ಎಂದರು.

ಕಾಂಗ್ರೆಸ್ ಹೈಕಮಾಂಡ್ ಗೆ ಕಪ್ಪಕೊಡದಿದ್ದರೆ ಅಧಿಕಾರದಲ್ಲಿದ್ದವರು ಪದಚ್ಯುತಿ ಆಗ್ತಾರೆ. ವೀರೇಂದ್ರ ಪಾಟೀಲ್ ಕಪ್ಪಕೊಡದೆ ಅಧಿಕಾರ ಕಳೆದುಕೊಂಡರು. ಅಧಿಕಾರದಲ್ಲಿ ಉಳಿದುಕೊಳ್ಳಲು ಕಪ್ಪ ಕೊಡಬೇಕು. ಅದಕ್ಕಾಗಿ ರಾಜ್ಯ ಪ್ರವಾಸ ಮಾಡಿದ್ದಾರೆ. ಕೈ ಎತ್ತಿ ಸಿದ್ದು ಡಿಕೆಶಿ ಒಗ್ಗಟ್ಟು ಪ್ರದರ್ಶನ ಮಾಡಿದರು.

ಜನರ ಮುಂದೆ ಎಲ್ಲಾ ವಿಚಾರದಲ್ಲಿ ಕೈ ಎತ್ತಿಬಿಟ್ಟಿದ್ದಾರೆ. ಬೆಲೆಯೇರಿಕೆ ಬರೆ, ಭ್ರಷ್ಟಾಚಾರ ಸಂದರ್ಭದಲ್ಲಿ ಕೈ ಎತ್ತಿದ್ದಾರೆ. ಈ ಸರಕಾರ ಜನರ ಮುಂದೆ ಸರಂಡರ್ ಆಗಿದ್ದಾರೆ ಎಂದು ಅರ್ಥ. ಜನ ಕಾಂಗ್ರೆಸ್ ನಾಯಕರಿಗೆ ಸರಿಯಾದ ಪಾಠ ಕಲಿಸುತ್ತಾರೆ ಎಂದರು.