ಉಡುಪಿ: ಪರ್ಯಾಯ ಶ್ರೀ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರ ಚತುರ್ಥ ಪರ್ಯಾಯದ ಜ್ಞಾನ ಕಾರ್ಯದ ಅಂಗವಾಗಿ ಸುಧಾ ಗೀತಾದಿ ಪಾಠ ಪಂಚಕ ಹಾಗೂ ಮಂಗಲ ಮಹೋತ್ಸವ, ಗುರುವಂದನೆ ಕಾರ್ಯಕ್ರಮ ರಾಜಾಂಗಣದಲ್ಲಿ ಶುಕ್ರವಾರ ನಡೆಯಿತು.

ಇದರ ಅಂಗವಾಗಿ ಸರ್ವಜ್ಞಪೀಠದಲ್ಲಿ ಶ್ರೀಪಾದರ ಉಪಸ್ಥಿತಿಯಲ್ಲಿ ಶಾಂತಿ ಪಾಠವನ್ನು ಮಾಡಿ ಮೆರವಣಿಗೆಯಲ್ಲಿ ವ್ಯಾಸ ಮೂರ್ತಿಯನ್ನು ತಂದು ರಾಜಾಂಗಣದಲ್ಲಿ ಬೆಳ್ಳಿಯ ಪೀಠದಲ್ಲಿ ಇರಿಸಿ ವಿದ್ಯಾರ್ಥಿಗಳಿಂದ ಅನುವಾದ ನಡೆಯಿತು. ನಂತರ ವ್ಯಾಸಮೂರ್ತಿಗೆ ಪೂಜೆಯನ್ನು ಮಾಡುವುದರ ಮೂಲಕ ಮಂಗಳೋತ್ಸವವು ಸಂಪನ್ನಗೊಂಡಿತು.