ಉಡುಪಿ: ಮಣಿಪಾಲದಲ್ಲಿ ದೀಪಾವಳಿ ಸಂದರ್ಭದಲ್ಲಿ ವಿದ್ಯಾರ್ಥಿಗಳು ಹುಚ್ಚಾಟ ಮೆರೆದಿದ್ದು, ಸಾರ್ವಜನಿಕ ಸ್ಥಳದಲ್ಲಿ ಅಪಾಯಕಾರಿ ರೀತಿಯಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದರು.
ವಾಹನಗಳ ಸಂಚಾರದ ನಡುವೆ ಪಟಾಕಿಗಳ ಅಬ್ಬರ ಜೋರಾಗಿದ್ದು, ಪಟಾಕಿಗಳನ್ನ ಹಚ್ಚಿ ರಸ್ತೆಗೆ ಎಸೆದು ಕಿಡಿಗೇಡಿಗಳು ಸಂಭ್ರಮಿಸಿದರು. ಈ ಹಿಂದೆ ಫೇರ್ ವೆಲ್ ನೆಪದಲ್ಲೂ ಕೂಡ ಇಲ್ಲಿ ಹುಚ್ಚಾಟ ಕಂಡುಬಂದಿತ್ತು ಮಣಿಪಾಲದಲ್ಲಿ ಇತ್ತೀಚಿನ ದಿನಗಳಲ್ಲಿ ಪೊಲೀಸರ ಭಯ ಇಲ್ಲ ಎನ್ನುವಂತ ಸ್ಥಿತಿ ಉಂಟಾಗಿದೆ.
ನಿರಂತರವಾಗಿ ಕಾನೂನನ್ನು ಗಾಳಿಗೆ ತೂರುತ್ತಿದ್ದರು ಕಠಿಣ ಕ್ರಮ ಯಾಕಿಲ್ಲ ಎಂದು ಸಾರ್ವಜನಿಕರು ಪ್ರಶ್ನೆ ಮಾಡಿದ್ದಾರೆ. ಇನ್ನೊಬ್ಬರಿಗೆ ಸಮಸ್ಯೆ ಉಂಟು ಮಾಡಿ ಸಂಭ್ರಮಿಸುವ ಅಗತ್ಯತೆ ಇದೆಯೇ?.
ಕಿಡಿಗೇಡಿಗಳ ವಿರುದ್ಧ ಕ್ರಮ ಜರುಗಿಸುವಂತೆ ಮಣಿಪಾಲದ ಸ್ಥಳೀಯರು ಆಗ್ರಹಿಸಿದ್ದಾರೆ.

