ಉಡುಪಿ: ಸೆಕ್ಯೂರಿಟಿ ಗಾರ್ಡ್ ಒಬ್ಬ ಶೋರೂಂ ಕ್ಲಸ್ಟರ್ ಮ್ಯಾನೇಜರ್ ಗೆ ಚೂರಿಯಿಂದ ಇರಿದಿರುವ ಘಟನೆಯೊಂದು ಉಡುಪಿಯ ಹರ್ಷ ಶೋರೂಂ ನಲ್ಲಿ ನಡೆದಿದೆ. ಆಗಸ್ಟ್ 10 ರ ಸಂಜೆ 7.30 ವೇಳೆಗೆ ನಡೆದ ಘಟನೆ ಇದಾಗಿದೆ. ಚೂರಿಯಿಂದ ಇರಿದು ಆರೋಪಿ ಅಟ್ಟಾಡಿಸಿಕೊಂಡು ಹೋಗಿರುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.
ರೋನ್ಸನ್ ಎವರೆಸ್ಟ್ (36) ಇರಿತಕ್ಕೊಳಗಾದವರು. ಇವರು ಹರ್ಷ ಶೋರೂಂನಲ್ಲಿ ಕ್ಲಸ್ಟರ್ ಮ್ಯಾನೇಜರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಅಲ್ಲೇ ಸೆಕ್ಯುರಿಟಿ ಕೆಲಸ ಮಾಡುತ್ತಿದ್ದ ಆರೋಪಿ ಪ್ರಸಾದ್ ಕೆಲಸದಲ್ಲಿ ಅಶಿಸ್ತು ತೋರಿದ್ದಕ್ಕಾಗಿ ಪ್ರಸಾದ್ ಗೆ ವಾರ್ನಿಂಗ್ ನೀಡಲಾಗಿತ್ತು. ಕೆಲಸದಿಂದ ತೆಗೆಯದಂತೆ ರೋನ್ಸನ್ ಬಳಿ ಪ್ರಸಾದ್ ಕೇಳಿಕೊಂಡಿದ್ದ.
ಮರುದಿನ ಮೀಟಿಂಗ್ ನಲ್ಲಿ ಚರ್ಚಿಸುವುದಾಗಿ ರೋನ್ಸನ್ ಹೇಳಿದ್ದರು.
ಮಾತುಕತೆ ಬಳಿಕ ಗ್ರೌಂಡ್ ಫ್ಲೋರ್ ನಲ್ಲಿ ಕಾದು ಕುಳಿತಿದ್ದ ಆರೋಪಿ ಪ್ರಸಾದ್, ಕ್ಲಸ್ಟರ್ ಮ್ಯಾನೇಜರ್ ರೋನ್ಸನ್ ಬರುತ್ತಿದ್ದಂತೆ ಚೂರಿಯಲ್ಲಿ ಇರಿದಿದ್ದಾನೆ. ಪ್ರಾಣಾಪಯ ಅರಿತು ರೋನ್ಸನ್ ಓಡಿದ್ದಾರೆ. ರೋನ್ಸನ್ ಬೆನ್ನಟ್ಟಿ ಹೋಗಿ ಆರೋಪಿ ಪ್ರಸಾದ್ ಕೊಲೆಗೆ ಯತ್ನಿಸಿದ್ದಾನೆ. ರೋನ್ಸನ್ ಮೇಲಿನ ಹಲ್ಲೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಕುರಿತುಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

