ಉಡುಪಿ: ಶ್ರೀ ಕೃಷ್ಣ ಮಠದಿಂದ ಮೋದಿಗೆ ಪರ್ಯಾಯ ಪುತ್ತಿಗೆ ಶ್ರೀಗಳಿಂದ ವಿಶೇಷ ಉಡುಗೊರೆ ನೀಡಲಾಯಿತು.
ಮುತ್ತಿನಿಂದ ಪೋಣಿಸಲ್ಪಟ್ಟ ನವಿಲುಗರಿಯುಳ್ಳ ಕಿರೀಟ ಸಮರ್ಪಣೆ ಮಾಡಿದರು. ಕಮಲದಲ್ಲಿ ನಿಂತಿರುವ ಶ್ರೀಕೃಷ್ಣನ ಸಣ್ಣ ಮೂರ್ತಿಯನ್ನು ಕೆತ್ತಿಸಿ ತುಳಸಿಮಣಿಯಲ್ಲಿ ನಿರ್ಮಿಸಿದ ಸ್ವರ್ಣಮಯ ಬ್ರಾಸ್ ಲೆಟ್ ನೀಡಲಾಯಿತು.

5 ವರೆ ಅಡಿ ಉದ್ಧದ ರಜತಮಯ ಕೃಷ್ಣನ ಕಡೆಗೋಲು, ಭಾರತ ಭಾಗ್ಯವಿದಾತ ಸಂಸ್ಕೃತದಲ್ಲಿ ಬರೆದಿರುವ ಸನ್ಮಾನ ಪತ್ರ, ಭಗವದ್ಗೀತೆ ಪುಸ್ತಕ, ಶಾಲು ಇವುಗಳನ್ನೆಲ್ಲಾ ಮೋದಿಗೆ ಸಮರ್ಪಣೆ ಮಾಡಲಾಯಿತು.

