ಉಡುಪಿ: ಪ್ರಧಾನಿ ನರೇಂದ್ರ ಮೋದಿ ಉಡುಪಿ ಭೇಟಿ ಹಿನ್ನೆಲೆ ಕಡಲ ತೀರದಲ್ಲಿ ಕಲಾವಿದರ ಕೈಚಳಕ ಮೂಡಿದೆ. ಪ್ರಧಾನಿ ನರೇಂದ್ರ ಮೋದಿ ಸ್ವಾಗತಕ್ಕೆ ವಿಶೇಷ ಕಲಾಕೃತಿ ರಚನೆಯಾಗಿದೆ.
ಮಲ್ಪೆ ಕಡಲ ತೀರದಲ್ಲಿ ಸ್ಯಾಂಡ್ ಥೀಮ್ ಕಲಾವಿದರಿಂದ ಮರಳು ಶಿಲ್ಪ, ಕಡಗೋಲು ಕೃಷ್ಣನ ಜೊತೆ ಪ್ರಧಾನಿ ನರೇಂದ್ರ ಮೋದಿಯ ಚಿತ್ರ ಬಿಡಿಸಲಾಗಿದೆ. ದೇಗುಲದ ಮುಂಭಾಗದಲ್ಲಿ ಕಡಗೋಲು ಹಿಡಿದು ನಿಂತ ಕೃಷ್ಣನ ಮುಂದೆ ಪ್ರಧಾನಿ ನರೇಂದ್ರ ಮೋದಿಯ ಚಿತ್ರಣ ಇದೆ.
ಕಲಾವಿದ ಹರೀಶ್ ಸಾಗ ಮತ್ತು ತಂಡದವರಿಂದ ದಿನವಿಡೀ ಪರಿಶ್ರಮ ಪಟ್ಟರು. ಮಲ್ಪೆ ಕಡಲ ತೀರಕ್ಕೆ ಬರುವ ಜನರನ್ನು ಆಕರ್ಷಿಸಲು ಕಲಾಕೃತಿ ರಚನೆ ಮಾಡಲಾಗಿದೆ. ಕಲಾಕೃತಿ ನೋಡಿ ಪ್ರವಾಸಿಗರು ಖುಷಿ ಪಡುತ್ತಿದ್ದಾರೆ.

