ಉಡುಪಿ: ಸೋನಂ ವಾಂಗ್ಚು ಉಪವಾಸ ವಿಚಾರವಾಗಿ ಉಡುಪಿ ಚಿಕ್ಕಮಗಳೂರು ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಪ್ರತಿಕ್ರಿಯೆ ನೀಡಿದ್ದಾರೆ. ಅತಿರೇಕ ಬುದ್ಧಿಜೀವಿಗಳು ಯಾರನ್ನಾದರೂ ಟೀಕೆ ಮಾಡಿ ತಾವು ದೊಡ್ಡವರಾಗಲು ಬಯಸುತ್ತಾರೆ. ಕೇಂದ್ರ ಸರ್ಕಾರ ಮತ್ತು ಪ್ರಧಾನಿಯನ್ನು ದೂರುವುದೇ ಖಾಯಂ ಉದ್ಯೋಗ.
ಜಿರಳೆ ಪಕ್ಷವನ್ನು ಅಸ್ತ್ರವಾಗಿ ಮಾಡಿಕೊಂಡಿದ್ದಾರೆ ಎಂದರು.

ದೇಶ ಮೊದಲು ಎಂದು ಕೆಲಸ ಮಾಡುವ ವಿಶ್ವದ ಅತ್ಯಂತ ಶ್ರೇಷ್ಠ ಪ್ರಧಾನಿ ಮೋದಿ. ರಾಷ್ಟ್ರದ್ರೋಹಿಗಳಿಂದ ಭಯೋತ್ಪಾದಕರಿಂದ ಅವರಿಗೆ ಸಣ್ಣ ಪುಟ್ಟ ತೊಂದರೆ ಸಹಜ. ಎಲ್ಲವನ್ನು ನಿಭಾಯಿಸುವ ಶಕ್ತಿ ನಮ್ಮ ರಾಷ್ಟ್ರಕ್ಕೆ ಪ್ರಧಾನಿಗೆ ಇದೆ. ಈ ಜಿರಳೆಗಳು ಹೆಗ್ಗಣಗಳು ಸದ್ದು ಮಾಡುವುದಿಲ್ಲ. ಉಪವಾಸ ಕುಳಿತವರು ಅವರಿಗೆ ಏನು ಸಮಸ್ಯೆ ಆಗಿದೆ ಎಂದು ಹೇಳಲಿ, ಅವರದ್ದು ವ್ಯಕ್ತಿಗತ ಅಭಿಪ್ರಾಯ ಎಂದರು.

ಸಂಸತ್ತಿನಲ್ಲಿ ಸಾರ್ವಜನಿಕ ಹಿತಾಸಕ್ತಿಯ ವಿಚಾರಗಳನ್ನು ಚರ್ಚೆ ಮಾಡಲು ಅವಕಾಶ ಇದೆ. ಪ್ರಜಾಪ್ರಭುತ್ವದಲ್ಲಿ ಸಂಸತ್ತಿಗೆ ಇಂಥ ದೊಡ್ಡ ವ್ಯವಸ್ಥೆ ಇಲ್ಲ. ಧರಣಿಕುತವರಿಗೆಲ್ಲ ಬೆಂಬಲ ಎಂದು ಹೇಳಿದರೆ ಸಮಸ್ಯೆ ಬಗ್ಗೆ ಹರಿಯಲ್ಲ. ಈ ದೇಶದ ಜನ ಅದಕ್ಕೆ ಮೌಲ್ಯ ಕೊಡುವುದಿಲ್ಲ ಎಂದರು.

ಬಿಡದಿ ವಿವಾದ ವಿಚಾರವಾಗಿ ಮಾತನಾಡಿ, ರೈತರು ಭೂಮಿ ಬಿಟ್ಟು ಕೊಡುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಮಾಜಿ ಪ್ರಧಾನಿ ಗಾಂಧಿ ಪ್ರತಿಮೆ ಎದರು ಧರಣಿ ಕೊರುತ್ತೇನೆ ಎಂದಿದ್ದಾರೆ. ಮುಖ್ಯಮಂತ್ರಿಗಳಿಗೆ ಇದರ ಗಂಭೀರತೆ ಮೊದಲು ಗೊತ್ತಿರಲಿಲ್ಲ ಅನಿಸುತ್ತದೆ. ಈಗ ಅರ್ಥವಾಗಿರಬಹುದು ರೈತರ ಭಾವನೆಗಳಿಗೆ ಬೆಲೆ ಕೊಡಬೇಕುಬಿಡದಿಯ ಜಮೀನು, ವಶಪಡಿಸಿಕೊಳ್ಳುವುದನ್ನು ಕೈ ಬಿಡಲಿ. ಇಲ್ಲವಾದರೆ ಬಹಳ ದೊಡ್ಡ ಬೆಲೆ ತೆರಬೇಕಾಗುತ್ತದೆ ಎಂದರು.

ಮೈಸೂರು ಕಂಬಳ ವಿವಾದ ವಿಚಾರವಾಗಿ ಮಾತನಾಡಿ, ಈ ಚರ್ಚೆಯನ್ನು ಯಾಕೋ ಬಿಜೆಪಿ ಮೇಲೆ ತಿರುಗಿಸಿದ್ದಾರೆ. ಯಾಕೆ ಈ ರೀತಿ ಮಾಡಿದ್ದಾರೋ ಗೊತ್ತಿಲ್ಲ. ಸದಾನಂದ ಗೌಡ ಮುಖ್ಯಮಂತ್ರಿ ಆಗಿದ್ದಾಗ ಪ್ರಥಮ ಬಾರಿ ಕಂಬಳಕೆ ಐದು ಕೋಟಿ ಅನುದಾನ ಕೊಟ್ಟಿದ್ದರು. ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ಕಂಬಳದ ಗುರಿಕಾರ ಎಂಬ ಕಾರಣಕ್ಕೆ, ಶಾಂತರಾಮ ಶೆಟ್ಟರಿಗೆ ರಾಜ್ಯೋತ್ಸವ ಪ್ರಶಸ್ತಿ ಕೊಡಲಾಯಿತು. ಬಿಜೆಪಿ ನಿರಂತರವಾಗಿ ಕಂಬಳವನ್ನು ಬೆಂಬಲಿಸಿಕೊಂಡೇ ಬಂದಿದೆ. 10 ಕೋಟಿ ಖರ್ಚು ಮಾಡಿ ಮೈಸೂರಲ್ಲಿ ಕಂಬಳ ಯಾಕೆ. ಅಲ್ಲಿಯವರು ಇದರ ಅಗತ್ಯ ಇಲ್ಲ ಎನ್ನುತ್ತಿದ್ದಾರೆ ಎಂದರು.

ರೈತರು ಕಂಬಳದ ಗುರಿಕಾರರು ಸ್ಥಳೀಯರನ್ನು ಕರೆದು ಮಾತುಕತೆ ನಡೆಸುವುದು ಸರಕಾರದ ಜವಾಬ್ದಾರಿ. ಕರಾವಳಿಯ ಮಾಲೀಕರು ರೈತರು ಎಲ್ಲರನ್ನೂ ಕರೆದು ಸಲಹೆ ಕೇಳಿ ಸಮಸ್ಯೆ ಬಗೆಹರಿಯುತ್ತೆ. ನಾನು ಮಾಡಿದ್ದೆ ಸರಿ ಎಂದು ಸರಕಾರ ವಾದ ಮಾಡುವುದರಲ್ಲಿ ಅರ್ಥ ಇಲ್ಲ. ಕಂಬಳ ಮಾಡುವುದು ಬೇಡ ಎಂದು ಯಾರು ಹೇಳುತ್ತಿಲ್ಲ. ಕಂಬಳಕ್ಕೆ ಶಕ್ತಿ ಕೊಟ್ಟಿರುವುದೇ ಬಿಜೆಪಿ. ರಾಜ್ಯದ ಬರ ಕೇಂದ್ರಕ್ಕೆ ಡಿಕೆಶಿ ಪತ್ರ ಬಿಜೆಪಿ ವಿರೋಧ ಯಾಕೆ. ನಾವು ಅದನ್ನು ಟೀಕೆ ಮಾಡಿಲ್ಲ ವಿಮರ್ಶೆ ಮಾಡಿದ್ದೇವೆ ಎಂದರು.

ರಾಜ್ಯದಲ್ಲಿ ವ್ಯಾಪಕ ಬರಗಾಲ ಇದೆ. ಕೇಂದ್ರ ಸರ್ಕಾರವನ್ನು ದೂರುವುದು ಸರಿಯಲ್ಲ ಎಷ್ಟು ಬರಗಾಲ ಇದೆ ಎಂಬುದನ್ನು ಅಧ್ಯಯನ ಮಾಡಬೇಕು. ನೆರವು ಕೇಳುವ ಹಕ್ಕು ರಾಜ್ಯ ಸರ್ಕಾರಕ್ಕೆ ಹಕ್ಕಿದೆ. ರಾಜ್ಯ ಸರ್ಕಾರ ಎಷ್ಟು ಹಣ ಒದಗಿಸುತ್ತೆ ಎಂದು ಹೇಳಲಿ ನಂತರ ಕೇಂದ್ರ ಸರಕಾರದಿಂದ ನೆರವು ಕೇಳಲಿ. ರಾಜ್ಯ ಸರ್ಕಾರ ಬಡವರಿಗೆ ಒಂದೇ ಒಂದು ಮನೆ ಕೊಟ್ಟಿಲ್ಲ. ಕೇಂದ್ರ ಸರಕಾರ ಕೊಟ್ಟರು ಜಾರಿ ಮಾಡುತ್ತಿಲ್ಲ. ಆಯುಷ್ಮಾನ್ ಭಾರತ್ ಕರ್ನಾಟಕದಲ್ಲಿ ಸಮರ್ಪಕವಾಗಿಲ್ಲ ಎಂದರು.

ಕೇಂದ್ರದ ನೆರವು ಕೇಳಿ ತೊಂದರೆ ಇಲ್ಲ ಆದರೆ ರಾಜ್ಯ ಸರ್ಕಾರವು ಸಹಕಾರ ಮಾಡಲಿ. ಕೇಂದ್ರಕ್ಕೆ ಪತ್ರ ಬರೆದು ಕೈ ತೊಳೆದುಕೊಳ್ಳಬೇಡಿ ನಿಮ್ಮ ಜವಾಬ್ದಾರಿ ಮರೆಯಬೇಡಿ. ಇದು ರಾಜಕೀಯದ ಆರೋಗ್ಯಕರ ಬೆಳವಣಿಗೆ ಅಲ್ಲ. ರಾಜ್ಯದಲ್ಲಿ ಹೆಚ್ಚುತ್ತಿರುವ ಅಪರಾಧ ಪ್ರಕರಣಗಳು. ರಾಜ್ಯದಲ್ಲಿ ಮಾದಕ ವಸ್ತುಗಳ ಗಂಡಾಂತರ ಹೆಚ್ಚಿದೆ. ವಿದ್ಯಾರ್ಥಿಗಳ ಬಗ್ಗೆ ಪೋಷಕರು ಆತಂಕದಲ್ಲಿದ್ದಾರೆ. ಕೊಲೆ ಸುಲಿಗೆಗಳು ರಾಜ್ಯದಲ್ಲಿ ತಾಂಡವ ಆಡುತ್ತಿದೆ. ಕಲ್ಬುರ್ಗಿ ಜೈಲಿನಿಂದಲೇ ಆರೋಪಿಗಳು ಓಡಿ ಹೋಗಿದ್ದಾರೆ. ಆದರೆ ಗೃಹ ಮಂತ್ರಿಗಳಿಗೆ ಆರ್ ಎಸ್ ಎಸ್ ರಿಜಿಸ್ಟರ್ ಆಗಿಲ್ಲ ಅನ್ನುವ ತಲೆಬಿಸಿ ಬಿಟ್ಟರೆ ಬೇರೆ ವಿಚಾರದ ಬಗ್ಗೆ ಗಮನ ಇಲ್ಲ. ಅವರಿಗೆ ಬೇರೆ ಏನು ಕೆಲಸ ಇಲ್ಲ ಎಂದರು.

ಕಾರಾಗ್ರದಿಂದ ಕೈದಿಗಳು ಓಡಿಹೋಗುವ ಘಟನೆ ನಡೆದಾಗ, ರಸ್ತೆಯಲ್ಲಿ ಹೆಣ್ಣು ಮಕ್ಕಳನ್ನು ಕೊಚ್ಚಿ ಕೊಲೆ ಮಾಡುವಾಗ, ಶಾಲೆಯ ಎದುರು ಬೀಡ ಅಂಗಡಿಯಲ್ಲಿ ಮಾದಕ ವಸ್ತುಗಳು ಮಾರಾಟ ಆಗುತ್ತಿರುವಾಗ, ಆರ್ ಎಸ್ ಎಸ್ ನೊಂದಾವಣೆ ಮಾಡುವ ತಲೆ ಬಿಸಿಗೆ ಸ್ವಲ್ಪ ದಿನ ಗ್ರಹ ಸಚಿವರು ರಜೆ ಕೊಡಲಿ ಎಂದರು.