ಕಾರ್ಕಳ: ಪ್ರಸಾದ್ ಬೆಳ್ಮಣ್ಣು ಹಾಗೂ ಉಷಾ ಬೆಳ್ಮಣ್ಣುರವರ ಪುತ್ರಿ ಶ್ರೀ ಲಕ್ಷ್ಮೀ ಬೆಳ್ಮಣ್ಣು ಹಿಂದುಸ್ಥಾನಿ ಶಾಸ್ತ್ರೀಯ ಸಂಗೀತವನ್ನು ಪಂಡಿತ್ ವಿನಾಯಕ್ ತೊರ್ವಿಯವರಲ್ಲಿ ಸಂಗೀತವನ್ನು ಅಭ್ಯಾಸ ಮಾಡುತ್ತಿದ್ದು ಕಾರ್ಕಳದ ನಿಟ್ಟೆ ಗ್ರಾಮದ ಶ್ರೀ ಕೈಲಾಜೆ ಉಮಾಮಹೇಶ್ವರ ದೇವಸ್ಥಾನಕ್ಕೆ ಬಂದು ದೇವರ ಸನ್ನಿದಾನದಲ್ಲಿ ಒಂದು ಸಂಗೀತ ಹಾಡನ್ನು ಹಾಡಬೇಕೆಂಬ ಇಚ್ಛೆಯಿಂದ ಹಾಡಿದರು.

ಬೆಂಗಳೂರಿನಿಂದ ಊರಿಗೆ ಬಂದಿದ್ದು ಅಲ್ಲಿಂದ ಅವರ ಸಂಬಂಧಿಕರಾದ ಅತ್ತೂರು ಗುರುರಾಜ್ ಭಟ್ ಅಡುಗೆ ಭಟ್ರು ಅವರೊಂದಿಗೆ ಬಂದು ಉಮಾಮಹೇಶ್ವರ ದೇವರ ಸನ್ನಿದಾನ ಕ್ಕೆ ಭೇಟಿ ನೀಡಿದರು.

