ಉಡುಪಿ: ನಗರದ ಲೋಕೋಪಯೋಗಿ ಕ್ವಾಟ್ರಸ್ ನಲ್ಲಿ ಸರಣಿ‌ ಕಳ್ಳತನ ನಡೆದಿರುವ ಘಟನೆ ನಗರದ ಮಿಷನ್ ಕಂಪೌಂಡ್ ಜಂಕ್ಷನ್ ನಲ್ಲಿ‌ ನಡೆದಿದೆ.

ಕಳ್ಳರ ಗ್ಯಾಂಗ್ ಪೊಲೀಸ್ ಜ್ಯಾಕೆಟ್ ನಲ್ಲಿ‌ ಬಂದಿದ್ದರು. ಬೀಗ ಒಡೆದು ಮೂರು ಮನೆಯನ್ನ‌ ದೋಚಿ ಗ್ಯಾಂಗ್ ಪರಾರಿಯಾಗಿದೆ. ಮನೆಯಲ್ಲಿದ್ದ ಚಿನ್ನ, ಬೆಳ್ಳಿ, ನಗದು ಹೀಗೆ ಲಕ್ಷಾಂತರ ಮೌಲ್ಯದ ವಸ್ತು ಕಳವಾಗಿದೆ.

ಮನೆಯನ್ನೆಲ್ಲ ಜಾಲಾಡಿ ದೋಚಿ ಗ್ಯಾಂಗ್ ಪರಾರಿಯಾಗಿದೆ. ಸಿಸಿಟಿವಿಯಲ್ಲಿ ‌ಕಳ್ಳರ ಚಹರೆ ಸಹಿತ ಕೃತ್ಯ ಬಯಲಾಗಿದೆ. ಕರ್ನಾಟಕ ಪೊಲೀಸ್ ಜಾಕೆಟ್ ‌ನಲ್ಲಿ ಮೂವರು ಕಳ್ಳರ ಗ್ಯಾಂಗ್ ಬಂದಿದೆ. ಬೀಗ ಹಾಕಿದ್ದ ಮನೆಯನ್ನೇ ಟಾರ್ಗೆಟ್ ಮಾಡಿ ಸರಣಿ‌ ಕಳವು ಮಾಡಲಾಗಿದೆ.

ಕರ್ನಾಟಕ ಪೊಲೀಸ್ ಜಾಕೆಟ್ ಧರಿಸಿ ಕೃತ್ಯದ ಹಿಂದೆ ಹಲವು ಶಂಕೆ ವ್ಯಕ್ತವಾಗಿದೆ. ಮುಂಜಾನೆ 4ರಿಂದ 4:30 ರ ಸುಮಾರಿಗೆ ಕಳವು ಕೃತ್ಯ ನಡೆದಿದೆ. ಕಳವು ನಡೆದು ಐದು ಗಂಟೆ ಕಳೆದರೂ ಸ್ಥಳಕ್ಕೆ ಪೊಲೀಸರು ಬರಲಿಲ್ಲ. ಮನೆ ಮಾಲೀಕರು ಮಾಹಿತಿ ನೀಡಿದರೂ ಪೊಲೀಸರು ಬೇಜವಾಬ್ದಾರಿ ವರ್ತನೆ ತೋರಿದ್ದಾರೆ.

ಪೊಲೀಸರ ವರ್ತನೆ ಕಂಡು‌ ಕ್ವಾಟ್ರಸ್ ನಿವಾಸಿಗಳು ಅನುಮಾನ ವ್ಯಕ್ತಪಡಿಸಿದರು. ಪೊಲೀಸ್ ಠಾಣೆಯಿಂದ ಅಣತಿ‌ ದೂರದಲ್ಲೇ ಕಳ್ಳತನ ನಡೆದಿದೆ. ಆರು‌ ತಿಂಗಳ ಹಿಂದೆ ಇದೇ ಕ್ವಾಟ್ರಸ್ ನಲ್ಲಿ ಕಳವು ನಡೆದಿದೆ. ಆರು‌ ತಿಂಗಳ ಬಳಿಕ ಕಳವಾದ ಪಕ್ಕದ ಮನೆಯನ್ನೇ ಗ್ಯಾಂಗ್ ದೋಚಿದೆ. ಪೊಲೀಸ್ ಠಾಣೆ ಅಕ್ಕ ಪಕ್ಕದಲ್ಲೇ ಅತೀ ಹೆಚ್ಚು ಸರಣಿ ಕಳವು ಕೃತ್ಯ ನಡೆಯುತ್ತಿದೆ.