ಉಡುಪಿ: ಆರ್ ಎಸ್ ಎಸ್ ನಿಷೇಧ ದಿನಕ್ಕೊಂದು ರೂಪ ಪಡೆಯುತ್ತಿದೆ. ನೆಹರೂ ಅವರೇ ಗಣರಾಜ್ಯೋತ್ಸವ ಪಥಸಂಚಲನಕ್ಕೆ ಆರ್ ಎಸ್ ಎಸ್ ಗೆ ಬನ್ನಿ ಎಂದು ಆಹ್ವಾನ ನೀಡಿದ್ರು, ಆರ್ ಎಸ್ ಎಸ್ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಅವರೇ ಅಸ್ಪೃಶ್ಯತೆ-ಜಾತೀಯತೆ ಇಲ್ಲದ ಸಂಘಟನೆ ಎಂದು ಮೆಚ್ಚುಗೆ ಸಲ್ಲಿಸಿದ್ರು ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿಕೆ ನೀಡಿದರು.

ಆರ್ ಎಸ್ ಎಸ್ ನಿಷೇಧಕ್ಕೆ ಸ್ವತಃ ನೆಹರೂ ಅವರೇ ಒಮ್ಮೆ ಪ್ರಯತ್ನ ಮಾಡಿದ್ರು, ಪ್ರಯತ್ನ ಕೈಗೂಡದೇ ಇದ್ದಾಗ ನೆಹರೂ ಅವರೇ ಸ್ವಾಗತಿಸಿದ್ರು, ಇಂದಿರಾಗಾಂಧಿ, ರಾಜೀವ್ ಗಾಂಧಿ ಪ್ರಯತ್ನ ಕೂಡ ಫಲಿಸಿಲ್ಲ. ರಾಹುಲ್ ಗಾಂಧಿ ಅದೇ ಮಾತನ್ನ ಆಡಿದ್ದಾರೆ ಪ್ರಿಯಾಂಕಾ ಗಾಂಧಿಗೆ ಆಗುವುದು ಇಲ್ಲ. ಇಂತಹ ಗೊಂದಲಗಳಿಗೆ ಸಮಯ ವ್ಯರ್ಥ ಮಾಡಬೇಡಿ ಎಂದರು.

ತಮ್ಮ ಇಲಾಖೆ ಅಭಿವೃದ್ಧಿ, ಬಡವರ ಕಲ್ಯಾಣದ ಕಡೆಗೆ ಗಮನ ಹರಿಸಲಿ. ಆರ್ ಎಸ್ ಎಸ್ ಬಗ್ಗೆ ಹರಿಪ್ರಸಾದ್, ಖರ್ಗೆ ಅಂತವರು ಲಘುವಾಗಿ ಮಾತನಾಡಬೇಡಿ. ಸ್ವಾತಂತ್ರ್ಯ ಹೋರಾಟಕ್ಕೂ ಮೊದಲು ಕಾಂಗ್ರೆಸ್ ಹಾಗೂ ಆರ್ ಎಸ್ ಎಸ್ ಅವರದ್ದೇ ಕೆಲಸ ಮಾಡಿಕೊಂಡು ಬಂದಿದೆ. ಕಾಂಗ್ರೆಸ್ ಇತಿಹಾಸದುದ್ದಕ್ಕೂ ಬೇರೆಯವರನ್ನು ಓಲೈಸಿಕೊಂಡು ಬಂದಿದೆ.

ಪಾಕಿಸ್ತಾನಕ್ಕೆ‌ ಜೈಕಾರ ಹಾಕಿದವರ ಮಾನಸಿಕತೆಗೆ ಸಮರ್ಥನೆ ಮಾಡಿದ್ರೆ, ಆರ್ ಎಸ್ ಎಸ್ ಭಾರತ್ ಮಾತಾಕಿ ಜೈ ಎನ್ನುವವರನ್ನ ಸೃಷ್ಟಿಸಿದೆ. ಇನ್ನಾದರೂ ಖರ್ಗೆ, ಹರಿಪ್ರಸಾದ್ ಅವರು ಸಂಘದ ಶಾಖೆಗೆ ಬರಲಿ. ಆರ್ ಎಸ್ ಎಸ್ ಆಲೋಚನೆ, ರಾಷ್ಟ್ರೀಯತೆ, ರಾಷ್ಟ್ರ ಭಕ್ತಿಯ ಬಗ್ಗೆ ಶಾಖೆಗೆ ಬಂದು ಗಮನಿಸಿ ಮಾತನಾಡಬೇಕು. ಆರ್ ಎಸ್ ಎಸ್ ಶಾಖೆಗೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಆಹ್ವಾನ ಕೊಟ್ಟಿದ್ದಾರೆ.

ರಾಜ್ಯದಲ್ಲಿ ಸಪ್ಟೆಂಬರ್ ಕ್ರಾಂತಿ ವಿಚಾರವಾಗಿ ಪ್ರತಿಕ್ರಿಯಿಸಿ, ಸಿದ್ದರಾಮಯ್ಯ ಅವರು ಅಧಿಕಾರ ಮೊಟಕುಗೊಳಿಸುವ ಚರ್ಚೆ ನಡೆಯುತ್ತಿದೆ. ಆಡಳಿತದಲ್ಲಿ ಭಿಗು ನಿಲುವು ಹೊರಟು ಹೋಗುತ್ತೆ, ಅಧಿಕಾರಿಗಳು ಈಗಿನ ಮುಖ್ಯಮಂತ್ರಿ ಕೆಳಗಿಳಿಯುವ ಮಾನಸಿಕತೆಗೆ ಒಗ್ಗಿ ಹೋಗಿದ್ದಾರೆ. ಜನಸಾಮಾನ್ಯರ ದೈನಂದಿನ ಬದುಕಿನ ಮೇಲೆ‌ ಪರಿಣಾಮ ಬೀಳಲಿದೆ. ಅವರಲ್ಲಿರುವ ತೀರ್ಮಾನ ಆದಷ್ಟು ಬೇಗ ಮುಗಿಸಿಕೊಂಡರೆ ಉತ್ತಮ. ಸಿದ್ದರಾಮಯ್ಯ ಹಾಗೂ ಡಿಕೆಶಿ ಗೆ ಸಂಸದ ಕೋಟ‌ ಶ್ರೀನಿವಾಸ ಪೂಜಾರಿ ಸಲಹೆ ನೀಡಿದರು.