ಉಡುಪಿ: ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಅಪರೂಪದ ಯಾಗ ನಡೆಯುತ್ತಿದೆ. ಲೋಕಕಲ್ಯಾಣದ ಸಂಕಲ್ಪ ಹೊತ್ತು ಆರಂಭವಾದ ಈ ಋಕ್ ಸಂಹಿತಾ ಯಾಗ ಪ್ರಪಂಚದಲ್ಲಿ ಯುದ್ಧೋನ್ಮಾದ ಕಡಿಮೆಯಾಗಲಿ ಎಂಬ ಪ್ರಾರ್ಥನೆಯೊಂದಿಗೆ ಮುಂದುವರೆದಿದೆ.
ಇದೊಂದು ಅಪರೂಪದ ಯಾಗವಾಗಿದ್ದು, ಪ್ರತಿದಿನ ನಾಡಿನ ಬೇರೆ ಬೇರೆ ಭಾಗಗಳಿಂದ ಸಂತರು ಬಂದು ಶಾಂತಿಗಾಗಿ ಪ್ರಾರ್ಥಿಸುತ್ತಿದ್ದಾರೆ. ಸಾವಿರಾರು ಜನ ಪ್ರತಿದಿನ ಪ್ರದಕ್ಷಿಣೆಯಲ್ಲಿ ಭಾಗಿಯಾಗಿದ್ದಾರೆ. ಒಟ್ಟು ಐದು ಲಕ್ಷ ಪ್ರದಕ್ಷಿಣೆ ಬರುವ ಮೂಲಕ, ವಿಶ್ವ ಶಾಂತಿಗೆ ಭಕ್ತರು ಪ್ರಾರ್ಥಿಸುತ್ತಿದ್ದಾರೆ.
ಮಾಜಿ ಶಾಸಕ ರಘುಪತಿ ಭಟ್ ಮುತುವರ್ಜಿಯಲ್ಲಿ ಯಾಗಕ್ಕೆ ಸಿದ್ಧತೆ ಮಾಡಲಾಗಿತ್ತು. ಪೇಜಾವರ ಪಲಿಮಾರು, ಕಾಣಿಯೂರು, ಅದಮಾರು, ಕೃಷ್ಣಾಪುರ, ಪುತ್ತಿಗೆ, ಕೇಮಾರು ಎಡನೀರು, ವಜ್ರದೇಹಿ ಭಂಡಾರ ಕೇರಿ ಸ್ವಾಮೀಜಿಗಳು ಸೇರಿದಂತೆ ಅನೇಕ ಸಂತರು ಭಾಗಿಯಾಗಿ ವಿಶ್ವಶಾಂತಿಗಾಗಿ ಪ್ರಾರ್ಥಿಸಿದ್ದಾರೆ. ಯುದ್ಧದ ನೇರ ಅಥವಾ ಪರೋಕ್ಷ ಪರಿಣಾಮಗಳು ಭಾರತವನ್ನು ಬಾಧಿಸದಿರಲಿ ಎಂದು ದೇವರಿಗೆ ಭಕ್ತಿ ಸಮರ್ಪಿಸಿದ್ದಾರೆ.

