ಉಡುಪಿ: ಉದ್ವಾರ್ಚನೆಯ ಪ್ರಯುಕ್ತ ಉಡುಪಿ ಶ್ರೀಕೃಷ್ಣಮಠದಲ್ಲಿ ಪರ್ಯಾಯ ಮಠಾಧೀಶರು ವಿಶೇಷ ಪೂಜೆ ನಡೆಸಿದರು. ಪರ್ಯಾಯ ಶ್ರೀಪುತ್ತಿಗೆ ಮಠದ ಇಬ್ಬರು ಸ್ವಾಮೀಜಿಗಳು ಶ್ರೀಕೃಷ್ಣ ಮಠದ ಒಳಗೆ ಸಾಂಪ್ರದಾಯಿಕ ಆಚರಣೆಗಳಿಗೆ ಸಾಕ್ಷಿಯಾದರು.

ಮಠದ ಗರ್ಭಗುಡಿಯನ್ನು ವರ್ಷಕ್ಕೊಮ್ಮೆ ಉದ್ವಾರ್ಚನೆಯ ಮೂಲಕ ಸ್ವಚ್ಛಗೊಳಿಸಲಾಗುತ್ತದೆ. ಈ ವೇಳೆ ಶ್ರೀ ಕೃಷ್ಣದೇವರ ಮೂಲ ಪ್ರತಿಮೆಯನ್ನು ಬುಟ್ಟಿಯಿಂದ ಮುಚ್ಚಿಡುವ ಅಪರೂಪದ ಪದ್ಧತಿ ಇದೆ.

ಪ

ಆ ದಿನದಂದು ಸಾರ್ವಜನಿಕರಿಗೆ ಮಹಾಪೂಜೆಯವರಿಗೆ ಶ್ರೀ ಕೃಷ್ಣನ ದರ್ಶನಕ್ಕೆ ಅವಕಾಶಗಳಿರುವುದಿಲ್ಲ. ಆ ಸಮಯದಲ್ಲಿ ಶ್ರೀ ಕೃಷ್ಣನ ವಿಗ್ರಹ ಸೇರಿದಂತೆ ಮಠದಲ್ಲಿನ ಗರ್ಭಗುಡಿ ಪ್ರತಿಯೊಂದು ಭಾಗದಲ್ಲಿ ಮತ್ತು ಪ್ರತೀ ಕಡೆಗಳಲ್ಲಿ ಶುಚಿತ್ವಗೊಳಿಸಲಾಗುತ್ತದೆ.

ಪ (1)

ಶ್ರೀ ಕೃಷ್ಣನ ಉದ್ವರ್ಚನೆಯ ನಂತರ ಪರ್ಯಾಯ ಶ್ರೀಗಳು ಕೃಷ್ಣನಿಗೆ ಮಹಾಪೂಜೆಯನ್ನು ನೆರೆವೇರಿಸಿದರು. ಆ ಬಳಿಕ ಸಾರ್ವಜನಿಕರಿಗೆ ಶ್ರೀ ಕೃಷ್ಣನ ದರ್ಶನಕ್ಕೆ ಅವಕಾಶವನ್ನು ಕಲ್ಪಿಸಿಕೊಡುತ್ತಾರೆ.