ಉಡುಪಿ: ಸಂಸತ್ತಿನಲ್ಲಿ ಅಂಬೇಡ್ಕರ್ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಹಾಗೂ ಸದನದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಬಗ್ಗೆ ಮಾನಹಾನಿ ಪದ ಬಳಕೆ ಮಾಡಿರುವ ಸಿ.ಟಿ. ರವಿ ವಿರುದ್ಧ ದಲಿತ ಹಕ್ಕುಗಳ ಸಮಿತಿ ಹಾಗೂ ಜನವಾದ ಮಹಿಳಾ ಸಂಘದ ಉಡುಪಿ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಇಂದು ಪ್ರತಿಭಟನೆ ನಡೆಸಲಾಯಿತು.
ಅಂಬೇಡ್ಕರ್ ಅವರಿಗೆ ಅವಹೇಳನ ಮಾಡಿರುವ ಅಮಿತ್ ಶಾರವರಿಗೆ ಸಚಿವರಾಗಿ ಮುಂದುವರಿಯುವ ಯಾವುದೇ ಅಧಿಕಾರ ಇಲ್ಲ. ತಕ್ಷಣವೇ ರಾಜೀನಾಮೆ ಕೊಡಬೇಕು. ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಬಗ್ಗೆ ಮಾನಹಾನಿ ಪದ ಬಳಕೆ ಮಾಡಿರುವ ಸಿ.ಟಿ. ರವಿರನ್ನು ಪರಿಷತ್ ಸದಸ್ಯತ್ವದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನಾ ಸಭೆಯಲ್ಲಿ ಜನವಾದಿ ಮಹಿಳಾ ಸಂಘದ ಜಿಲ್ಲಾ ಕಾರ್ಯದರ್ಶಿ ಶೀಲಾವತಿ,ಕುಂದಾಪುರ ಮಹಿಳಾ ಸಂಘದ ಅಧ್ಯಕ್ಷರಾದ ಬಲ್ಕೀಸ್, ಬೈಂದೂರು ಮಹಿಳಾ ಸಂಘದ ಅಧ್ಯಕ್ಷರಾದ ನಾಗರತ್ನ ನಾಡ,ಮುಖಂಡರಾದ ನಳಿನಿ.ಎಸ್,ಗಿರಿಜಾ,ರವಿಕಲಾ,ಪದ್ದು, ದಲಿತ ಹಕ್ಕುಗಳ ಸಮಿತಿ ಉಡುಪಿ ಜಿಲ್ಲಾ ಸಂಚಾಲಕ ರಾದ ಸಂಜೀವ ಬಳ್ಕೂರು,ಮುಖಂಡರಾದ ರವಿ.ವಿ.ಎಮ್,ಕುಂದಾಪುರ,ರಾಮ ಕಾರ್ಕಡ,ಸಾಲಿಗ್ರಾಮ,
ರಂಗನಾಥ ಉಡುಪಿ,ಸಿಐಟಿಯು ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್ ಕಲ್ಲಾಗಾರ,ಕೋಶಾಧಿಕಾರಿ ಶಶಿಧರ ಗೋಲ್ಲ,ಉಪಾಧ್ಯಕ್ಷ ರಾದ ಎಚ್.ನರಸಿಂಹ,ಚಿಕ್ಕ ಮೊಗವೀರ,ಕಾರ್ಯದರ್ಶಿ ಚಂದ್ರಶೇಖರ, ಸಿಐಟಿಯು ಉಡುಪಿ ವಲಯ ಸಂಚಾಲಕ ರಾದ ಕವಿರಾಜ್. ಎಸ್.ಕಾಂಚನ್,ಮುಖಂಡರಾದ ಸುಭಾಸ್ ನಾಯಕ್,ಸದಾಶಿವ ಪೂಜಾರಿ,ಉಮೇಶ್ ಕುಂದರ್, ಮೋಹನ್ ಕರ್ನಾಟಕ ಪ್ರಾಂತ ಕ್ರಷಿಕೂಲಿಕಾರರ ಸಂಘದ ಜಿಲಾ ಕಾರ್ಯದರ್ಶಿ ವೆಂಕಟೇಶ ಕೋಣಿ ಉಪಸ್ಥಿತರಿದ್ದರು.

