ಉಡುಪಿ: ಹಾವಂಜೆ ಪಂಚಾಯತ್ ವ್ಯಾಪ್ತಿಯಲ್ಲಿ ಮದರಸಕ್ಕೆ ಅನುಮತಿ ನೀಡಿದ್ದು, ಬ್ರಹ್ಮಾವರದ ಹಾವಂಜೆ ಪಂಚಾಯತ್ ನಲ್ಲಿ ಹೈಡ್ರಾಮ ನಡೆಯಿತು. ಸಾಮಾನ್ಯ ಸಭೆಯ ನಿರ್ಣಯವನ್ನು ಪಿಡಿಒ, ಕಾರ್ಯದರ್ಶಿ ಧಿಕ್ಕರಿಸಿರುವ ಆರೋಪ ಕೇಳಿಬಂದಿದೆ.
ಪಂಚಾಯತ್ ರಾಜ್ ಹಕ್ಕನ್ನು ಉಲ್ಲಂಘಿಸಿರುವ ಆರೋಪ ಕೇಳಿಬಂದಿದ್ದು, ವಿಶೇಷ ಸಭೆಗೆ ಪೂರ್ವಾನುಮತಿ ಇಲ್ಲದೆ ದಿಢೀರ್ ರಜೆ ಹಾಕಿ ಸಭೆಗೆ ಪಿ ಡಿ ಒ ಗೈರಾಗಿದ್ದಾರೆ. ಗ್ರಾಮ ಪಂಚಾಯತ್ ಅಧಿಕಾರಿಗಳ ಕಾರ್ಯವೈಖರಿಗೆ ಆಕ್ರೋಶ ವ್ಯಕ್ತಪಡಿಸಿದರು.

ಶಾಸಕ ಯಶ್ ಪಾಲ್ ಸುವರ್ಣ ಆಕ್ಷೇಪ ವ್ಯಕ್ತಪಡಿಸಿದ್ದು, ಪಂಚಾಯತ್ ಮುಂದೆ ಹಿಂದೂ ಸಂಘಟನೆಯ ಕಾರ್ಯಕರ್ತರು ಜಮಾವಣೆಗೊಂಡರು. ಪರವಾನಿಗೆ ರದ್ದು ಪಡಿಸದಿದ್ದರೆ ಹೋರಾಟ ನಡೆಸಲಾಗುವುದು ಎಂದು ವಿಶೇಷ ಸಭೆಯಲ್ಲಿ ಶಾಸಕ ಸುವರ್ಣ ಆಕ್ರೋಶ ವ್ಯಕ್ತಪಡಿಸಿದರು.

