ಉಡುಪಿ: ಪರಶುರಾಮ ಥೀಂ ಪಾರ್ಕ್ ವಿವಾದ ನಡೆಯುತ್ತಿದ್ದು, ನ್ಯಾಯಾಲಯಕ್ಕೆ ಕಾರ್ಕಳ ಪೊಲೀಸರು ಚಾರ್ಜ್ ಶೀಟ್ ಸಲ್ಲಿಸಿದರು. ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಕಾಂಗ್ರೆಸ್ ನಿರಂತರವಾಗಿ ಮಾಡಿದ ಆರೋಪ ಸುಳ್ಳಾಗಿದೆ. ಚಾರ್ಜ್ ಶೀಟ್ ಮುಖಾಂತರ ಅದು ಸಾಬೀತಾಗಿದೆ. ಸ್ಥಳೀಯ ನಾಯಕರ ಆರೋಪ ಕೇಳಿ ಕಾಂಗ್ರೆಸ್ ರಾಜ್ಯ ನಾಯಕರು ಕೂಡ ಟೀಕಿಸಿದರು.

ಕಟ್ಟು ಕಥೆಗಳನ್ನು ಸೃಷ್ಟಿಸುವ ಪ್ರಯತ್ನಗಳಿಗೆ ಸೋಲಾಗಿದೆ. ಸಿದ್ದರಾಮಯ್ಯ ಸರಕಾರ ವಿಪಕ್ಷಗಳ ವಿರುದ್ಧ ಸುಳ್ಳು ಆರೋಪ ಮಾಡುತ್ತಾ ಬಂದಿದೆ. ತನಿಖೆ ನೆಪದಲ್ಲಿ ಟಾರ್ಗೆಟ್ ಮಾಡುವ ಪ್ರಯತ್ನ ಇಡೀ ರಾಜ್ಯದಲ್ಲಿ ನಡೆದಿದೆ. ಪರಶುರಾಮ ಥೀಮ್ ಪಾರ್ಕ್ ನನ್ನ ಕನಸಿನ ಯೋಜನೆ. ದಕ್ಷಿಣ ಭಾರತದ ಶ್ರೇಷ್ಠ ಪ್ರವಾಸಿ ತಾಣವಾಗಬೇಕು ಅನ್ನೋದು ಕನಸು. ಹೊಸ ಪರಿಕಲ್ಪನೆ ಯೊಂದಿಗೆ ಥೀಮ್ ಪಾರ್ಕ್ ನಿರ್ಮಾಣ ಮಾಡಿದ್ದೆವು.

ದ್ವೇಷದ ರಾಜಕಾರಣಕ್ಕೆ ಕಾಂಗ್ರೆಸ್ ವಿನಾಕಾರಣ ಆರೋಪ ಮಾಡಿದೆ. ಪರಶುರಾಮನ ಮೂರ್ತಿಯನ್ನು ಫೈಬರ್ ಎಂದು ಸುಳ್ಳು ಹೇಳಿದರು. ರಾಜ್ಯಾದ್ಯಂತ ಫೈಬರ್ ಮೂರ್ತಿ ಎಂದು ಪ್ರಚಾರ ಮಾಡಿದರು. ಕಾರ್ಕಳದ ಪ್ರವಾಸೋದ್ಯಮವನ್ನು ವ್ಯವಸ್ಥಿತವಾಗಿ ಕಾಂಗ್ರೆಸ್ ಹಾಳು ಮಾಡಿದೆ. ಗುಣಮಟ್ಟದಲ್ಲಿ ವ್ಯತ್ಯಾಸ ಆಗಿದ್ದರೆ ತನಿಖೆ ಮಾಡಿ ಎಂದು ನಾನು ಹೇಳುತ್ತಲೇ ಬಂದಿದ್ದೆ, ಅಪಪ್ರಚಾರ ಮಾಡಿ ಕಾರ್ಕಳಕ್ಕೆ ಅಪಮಾನ ಮಾಡಬೇಡಿ ಎಂದಿದ್ದೆ ಎಂದರು.

ಒಳ್ಳೆಯ ತನಿಖೆ ಮಾಡಿ ಎಂದು ನಾನು ಸ್ವತಃ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದೆ, ಕಾಂಗ್ರೆಸ್ ಎರಡು ವರ್ಷ ಕಾಲ ಹರಣ ಮಾಡಿದೆ. ಚಾರ್ಜ್ ಶೀಟ್ ಸಲ್ಲಿಸುವ ಮೂಲಕ ಎಲ್ಲವೂ ಸ್ಪಷ್ಟವಾಗಿದೆ. ಫೈಬರ್ ಅನ್ನುವ ಆರೋಪ ಸುಳ್ಳಾಗಿದೆ. ಫೈಬರ್ ಅಲ್ಲ ಹಿತ್ತಾಳೆ ಅನ್ನೋದನ್ನ ಸ್ಪಷ್ಟ ಮಾಡಿದ್ದಾರೆ. ಎಲ್ಲ ವಿಚಾರಗಳು ನ್ಯಾಯಾಲಯದಲ್ಲಿ ತನಿಖೆ ಆಗಲಿ. ಸರ್ಕಾರ ಬಾಕಿ ಉಳಿಸಿಕೊಂಡ ಹಣ ತಕ್ಷಣ ಬಿಡುಗಡೆ ಮಾಡಿ.

ಕಾಮಗಾರಿ ಪೂರ್ಣಗೊಳಿಸಿ ಪ್ರವಾಸೋದ್ಯಮ ಇಲಾಖೆಗೆ ಬಿಟ್ಟುಕೊಡಿ. ಕಾಂಗ್ರೆಸ್ ಈ ವಿಚಾರವನ್ನು ಜೀವಂತವಾಗಿರುವ ಪ್ರಯತ್ನ ಮಾಡಿದೆ. ಉಪಮುಖ್ಯಮಂತ್ರಿಗಳೆ ಬಂದು ಈ ವಿಚಾರ ಹೇಳಿದ್ದರು. ಮುಂದಿನ ಚುನಾವಣೆವರೆಗೆ ಪೂರ್ಣಗೊಳಿಸಲ್ಲ ಎಂದಿದ್ದರು. ಪರಶುರಾಮನನ್ನು ಕೊಲೆ ಮಾಡಿದರು ಎಂದು ಅಪ್ರಚಾರ ಹಬ್ಬಿಸಿದರು. ಕಾರ್ಕಳದ ಜನ ಕ್ಷಮಿಸಲ್ಲ. ಸರಕಾರಕ್ಕೆ ಈ ಕೆಲಸ ಪೂರ್ಣಗೊಳಿಸುವ ಇಚ್ಛೆ ಇಲ್ಲವಾದರೆ ಬಿಟ್ಟುಬಿಡಲಿ.

ನಾವು ಜನರಿಂದ ಭಿಕ್ಷೆ ಬೇಡಿ ಆದರೂ ನಿರ್ಮಾಣ ಮಾಡುತ್ತೇವೆ. ಅಪಪ್ರಚಾರ ಗಳಿಗೆ ಸೋಲಾಗಿದೆ ವಾದ ವಿವಾದ ಅಗತ್ಯವಿಲ್ಲ. ನಾನು ಲೋಹತಜ್ಞ ಅಲ್ಲ. ಹಿತ್ತಾಳೆ ಕಂಚು ಈ ವಿಚಾರದಲ್ಲಿ ಚರ್ಚೆಗೆ ಹೋಗಲ್ಲ. ಮೊದಲು ಸಿಮೆಂಟ್ ಅಂದ್ರು ಆಮೇಲೆ ಪ್ಲಾಸ್ಟಿಕ್ ಅಂದ್ರು ನಂತರ ಫೈಬರ್ ಅಂದ್ರು, ಜಿ ಎಸ್ ಟಿ ಸರಿ ಇಲ್ಲ ಎಂದು ಆರೋಪಿಸಿದರು. ಎಲ್ಲಾ ವಿಚಾರಗಳಿಗೂ ಅಧಿಕಾರಿಗಳೇ ಉತ್ತರ ಕೊಡಬೇಕು. ಅಗ್ರಿಮೆಂಟಿನಲ್ಲಿ ಏನು ವ್ಯತ್ಯಾಸ ಆಗಿದೆ ಅನ್ನೋದು ತನಿಖೆ ಆಗಲಿ. ತನಿಖೆಯಲ್ಲಿ ನಾವು ಹಸ್ತಕ್ಷೇಪ ಮಾಡಲ್ಲ ಎಂದರು.