ಉಡುಪಿ: ತೆಂಕನಿಡಿಯೂರು ಗ್ರಾಪಂ ಕಚೇರಿಯಲ್ಲಿ ಇಂದು ಕರೆದ ವಿಶೇಷ ಸಾಮಾನ್ಯ ಸಭೆಯು ಭಾರೀ ಕೋಲಾಹಲಕ್ಕೆ ಕಾರಣವಾಯಿತು. ಈ ಸಭೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಬೆಂಬಲಿತ ಸದಸ್ಯರು ಪರಸ್ಪರ ಕೈಕೈ ಮಿಲಾಯಿಸಿಕೊಂಡಿದ್ದಾರೆ.

ಎಸ್.ಎಲ್.ಆರ್.ಎಮ್ ಘಟಕದಲ್ಲಿ ಶೇಖರಣೆ ಆಗಿರುವ ತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿದಂತೆ ವಿಶೇಷ ಸಭೆ ಕರೆಯಲಾಗಿತ್ತು. ಇನ್ನೊಂದೆಡೆ ತ್ಯಾಜ್ಯ ವಿಲೇವಾರಿ ಮಾಡುವಂತೆ ಒತ್ತಾಯಿಸಿ ಪಂಚಾಯತ್ ಕಚೇರಿ ಹೊರಗಡೆ ಗ್ರಾಮಸ್ಥರು ಪ್ರತಿಭಟನೆ ನಡೆಸುತ್ತಿದ್ದರು.ಕೋರಂ ಇಲ್ಲದೆ ಸಭೆ ನಡೆಸಲು ಬಿಜೆಪಿ ಸದಸ್ಯರು ವಿರೋಧಿಸಿದರು.

ಕ (1)

ಬಳಿಕ ಮಾತಿಗೆ ಮಾತು ಬೆಳೆದು ಬಿಜೆಪಿ ಹಾಗೂ ಕಾಂಗ್ರೆಸ್ ಸದಸ್ಯರ ಜಗಳಕ್ಕೆ ಕಾರಣವಾಗಿದೆ. ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿ ಪರಿಣಾಮ ಪಂಚಾಯತ್ ಸದಸ್ಯರು, ಕೈ ಕೈ ಮಿಲಾಯಿಸಿಕೊಂಡು ತಳ್ಳಾಡಿದರು. ವಿಶೇಷ ಸಭೆಯಿಂದ ಬಿಜೆಪಿ ಸದಸ್ಯರನ್ನು ಕಾಂಗ್ರೆಸ್ ಸದಸ್ಯರು ಹೊರ ತಬ್ಬಿದರು.

ಇಒ, ಪೊಲೀಸರ ಎದುರೇ ಎಳೆದಾಡಿಕೊಂಡು ಜಗಳವಾಡಿದರು. ಜಗಳದಲ್ಲಿ ಸಿಲುಕಿದ ಮಹಿಳಾ ಗ್ರಾ.ಪಂ. ಸದಸ್ಯರಿಗೆ ಗಾಯ ಉಂಟಾಯಿತು. ಸುಮಾರು ಅರ್ಧ ಗಂಟೆಗಳ ಕಾಲ ಬಿಗುವಿನ ವಾತಾವರಣ ನಿರ್ಮಾಣವಾಯಿತು. ಕಾಂಗ್ರೆಸ್ ಸದಸ್ಯರ ವಿರುದ್ಧ ಠಾಣೆಗೆ ದೂರು ನೀಡಲು ಬಿಜೆಪಿ ಸದಸ್ಯರು ನಿರ್ಧರಿಸಿದ್ದಾರೆ.