ಉಡುಪಿ: ಕರಾವಳಿಯಲ್ಲಿ ದೇವಸ್ಥಾನಗಳ ಆದಾಯ ಹೆಚ್ಚಳ ಕುರಿತು ಉಡುಪಿಯಲ್ಲಿ ಸಚಿವ ರಾಮಲಿಂಗ ರೆಡ್ಡಿ ಹೇಳಿಕೆ ನೀಡಿದ್ದಾರೆ. 25 ಲಕ್ಷಕ್ಕೂ ಅಧಿಕ ಆದಾಯ ಹೊಂದಿರುವ 205 ಎ-ಗ್ರೇಡ್ ದೇವಸ್ಥಾನಗಳಿವೆ. 5 ಲಕ್ಷದಿಂದ 25 ಲಕ್ಷ ಆದಾಯ ಹೊಂದಿರುವ ಬಿ-ಗ್ರೇಡ್ ದೇವಸ್ಥಾನಗಳೂ ಇವೆ. ಎ ಹಾಗೂ ಬಿ ಗ್ರೇಡ್ ದೇವಸ್ಥಾನಗಳ ಮೂರನೇ ಒಂದು ಭಾಗ ಕರಾವಳಿ ಜಿಲ್ಲೆಗಳಲ್ಲಿವೆ.

ದೇವಸ್ಥಾನಗಳ ಆಡಳಿತ ಮಂಡಳಿಯವರೇ ನಿರ್ವಹಣೆ ಮಾಡುತ್ತಿದ್ದಾರೆ. ಉತ್ತಮ ನಿರ್ವಹಣೆಯಿಂದ ಕರಾವಳಿಯ ದೇವಸ್ಥಾನಗಳಿಗೆ ಭಕ್ತರ ಸಂಖ್ಯೆ ಹೆಚ್ಚಳ. ಕಳೆದ 4-5 ವರ್ಷಗಳಿಗೆ ಹೋಲಿಸಿದರೆ ಈ ವರ್ಷ ಭಕ್ತರ ಸಂಖ್ಯೆ ಹೆಚ್ಚು. ಈ ವರ್ಷ ದೇವಸ್ಥಾನಗಳ ಹುಂಡಿಯಲ್ಲಿ 50 ರಿಂದ 60 ಕೋಟಿ ರೂ. ಹೆಚ್ಚುವರಿ ಸಂಗ್ರಹವಾಗಿದೆ.

ದೇವಸ್ಥಾನದ ಕಾಣಿಕೆ ಹುಂಡಿ ಕುರಿತು ಅಪಪ್ರಚಾರ ಬೇಡ ಎಂದು ಸಚಿವರು ಹೇಳಿದರು. 2003ರ ಕಾಯ್ದೆಯ ಬಳಿಕ ಹುಂಡಿ ಹಣವನ್ನು ಅದೇ ದೇವಸ್ಥಾನ ನಿರ್ವಹಿಸಬೇಕು. ಒಂದು ದೇವಸ್ಥಾನದ ಹಣವನ್ನು ಮತ್ತೊಂದು ದೇವಸ್ಥಾನಕ್ಕೆ ನೀಡಲು ಅವಕಾಶ ಇಲ್ಲ.ಉಳಿದ ಹಣ ಆಡಳಿತ ಮಂಡಳಿಯ ಉಳಿತಾಯ ಖಾತೆಯಲ್ಲಿ ಇಡಲಾಗುತ್ತದೆ ಎಂದರು.