ಉಡುಪಿ: ಫೇರ್ ವೆಲ್ ಹೆಸರಿನಲ್ಲಿ ಮಣಿಪಾಲ ವಿದ್ಯಾರ್ಥಿಗಳು ಹುಚ್ಚಾಟ ಮೆರೆದಿದ್ದು, ಒಂದು ದಿನದ ಹಿಂದೆ ಅಷ್ಟೇ, ಮಣಿಪಾಲದ ಸ್ವೀಟ್ ಫೈಟ್ ವೈರಲ್ ಆಗಿತ್ತು. ಇದೀಗ ವಿದ್ಯಾರ್ಥಿಗಳ ಫೇರ್ ವೇಲ್ ಹುಚ್ಚಾಟ ವೈರಲ್ ಆಗಿದೆ.
ಕಾಲೇಜಿನ ಅಂತಿಮ ದಿನದ ಸಂಭ್ರಮಾಚರಣೆಯನ್ನು ವಿದ್ಯಾರ್ಥಿಗಳು ಮಾಡಿದರು. ಸಂಭ್ರಮಾಚರಣೆಯ ನೆಪದಲ್ಲಿ ಬರ್ನ್ ಆವುಟ್ ಮಾಡಿ ವಿದ್ಯಾರ್ಥಿಗಳು ಹುಚ್ಚಾಟ ಮೆರೆದಿದ್ದಾರೆ. ಕಾರಿನ ಮೇಲೆ ಸ್ಪಾರ್ಕಲರ್ ಪಟಾಕಿ ಹಚ್ಚಿ ಸಂಭ್ರಮಿಸಿದ ವಿಡಿಯೋ ವೈರಲ್ ಆಗಿದೆ.
ರಾತ್ರಿ ವೇಳೆ ಸನ್ ರೂಫ್ ತೆರೆದು ಕಾರಿನಲ್ಲಿ ಸಿಟ ರೌಂಡ್ಸ್ ವಿದ್ಯಾರ್ಥಿಗಳು ಹಾಕಿದ್ದಾರೆ. ಪಟಾಕಿ ಸಿಡಿಸಿ, ಕರ್ಕಶ ಮ್ಯೂಸಿಕ್ ನೊಂದಿಗೆ ಮಣಿಪಾಲದಲ್ಲಿ ಸುತ್ತಾಡಿ ಸಂಭ್ರಮಾಚರಣೆ ಮಾಡಿದ್ದಾರೆ. ಸ್ಟ್ರೀಟ್ ಫೈಟ್ ವಿಡಿಯೋ ಬಳಿಕ ಮತ್ತೆ ಫೇರ್ವೆಲ್ ವಿಡಿಯೋ ಮೂಲಕ ಮಣಿಪಾಲ ಮತ್ತೆ ಸುದ್ದಿಯಲ್ಲಿದೆ.

