ಉಡುಪಿ: ಮಹೇಶ್ ಮರ್ಣೆ ಅಪರೂಪದ ಕಲಾವಿದ. ಅಶ್ವತ್ಥ ಎಲೆಯಲ್ಲಿ ಇವರು ಖ್ಯಾತನಾಮರ ಭಾವಚಿತ್ರಗಳನ್ನು ಮೂಡಿಸಿ ಹೆಸರು ಮಾಡಿದ್ದಾರೆ. ಅದೇ ರೀತಿ ವಿವಿಧ ಸಂದರ್ಭಗಳಲ್ಲಿ ಕಲೆಯ ಮೂಲಕ ಜಾಗೃತಿ ಮೂಡಿಸುತ್ತಾ ಬಂದಿದ್ದಾರೆ.

ಇದೀಗ ಮಹೇಶ್ ಮರ್ಣೆ ಅವರು 5 ವರ್ಷದ ಕೆಳಗಿನ ಮಕ್ಕಳಿಗೆ ಜೂ. 28ರಂದು ನಡೆಯುವ ಪೋಲಿಯೋ ಲಸಿಕೆ ತಪ್ಪದೆ ಹಾಕಿಸಿ ಎಂಬ ಚಿತ್ತಾರವನ್ನು ಅಶ್ವತ್ಥ ಎಲೆಯಲ್ಲಿ ರಚಿಸುವ ಮೂಲಕ ಜನ ಜಾಗೃತಿ ಮೂಡಿಸಿದ್ದಾರೆ.