ಉಡುಪಿ: ಹಾವಂಜೆ ಪಂಚಾಯತ್ ನಲ್ಲಿ ಮದರಸಾ ವಿಚಾರದ ಹೈಡ್ರಾಮ ನಡೆಯುತ್ತಿದ್ದು, ಉಡುಪಿಯಲ್ಲಿ ಶಾಸಕ ಯಶ್ ಪಾಲ್ ಸುವರ್ಣ ಹೇಳಿಕೆ ನೀಡಿದ್ದಾರೆ.
ಕಾನೂನು ಮೀರಿ ಹೈಕೋರ್ಟ್ ಸುತ್ತೋಲೆಯನ್ನು ಪಿಡಿಒಗಳು ಧಿಕ್ಕರಿಸಿದ್ದಾರೆ. ಹಿಂದಿನ ಪಿಡಿಒ ಮತ್ತು ಹೊಸ ಪಿಡಿಒ ತರಾತುರಿಯಲ್ಲಿ ಮದರಸಕ್ಕೆ ಪರವಾನಿಗೆ ಕೊಟ್ಟಿದ್ದಾರೆ. ಪಂಚಾಯತ್ ನ ಸಾಮಾನ್ಯ ಸಭೆಯಲ್ಲಿ ಪರವಾನಿಗೆ ನೀಡಬಾರದು ಎಂದು ನಿರ್ಣಯಿಸಲಾಗಿತ್ತು ಎಂದರು.
ಪಂಚಾಯತ್ ರಾಜ್ ಕಾನೂನಿಗೆ ವಿರುದ್ಧವಾಗಿ ಅಧಿಕಾರಿಗಳು ನಡೆದುಕೊಂಡಿದ್ದಾರೆ. ಜಿಲ್ಲಾಧಿಕಾರಿಗಳ ಗಮನಕ್ಕೆ ಈ ವಿಚಾರವನ್ನು ತರಲಾಗಿದೆ. ಸಾಮಾನ್ಯ ಸಭೆ ಅಧ್ಯಕ್ಷರು ತೆಗೆದುಕೊಳ್ಳಬೇಕಾದ ತೀರ್ಮಾನವನ್ನು ಪಿಡಿಒ ತೆಗೆದುಕೊಂಡಿದ್ದಾರೆ. ಪಿಡಿಒಗಳು ರಾತ್ರಿ ಎಂಟು ಗಂಟೆಗೆ ಆದೇಶವನ್ನು ತಿದ್ದುಪಡಿ ಮಾಡಿದ್ದಾರೆ ಎಂದರು.
ಅಧಿಕಾರಿಗಳು ಫೋನ್ ಸ್ವಿಚ್ ಆಫ್ ಮಾಡಿ ರಜೆಯಲ್ಲಿ ಹೋಗಿದ್ದಾರೆ. ಹೊಸದಾಗಿ ಬಂದಿರೋ ಪಿಡಿಒ ಮೊದಲ ದಿನ ರಜೆ ಮಾಡಿ ನಾಪತ್ತೆಯಾಗಿದ್ದಾರೆ. ರಾಜ್ಯ ಸರ್ಕಾರದ ಕೈಗೊಂಬೆಗಳಂತೆ ಅಧಿಕಾರಿಗಳು ವರ್ತಿಸುತ್ತಿದ್ದಾರೆ. ಸರಕಾರಕ್ಕೆ ಅಭಿವೃದ್ಧಿ ಬಗ್ಗೆ ಚಿಂತನೆ ಇಲ್ಲ. ಅಧಿಕಾರಿಗಳ ಮೂಲಕ ಇಸ್ಲಾಮೀಕರಣವನ್ನು ಜಾರಿಗೆ ತರಲು ಹೊರಟಿದ್ದಾರೆ ಎಂದರು.
ಮುಸಲ್ಮಾನರ ಒಂಭತ್ತು ಮನೆಗಳಿಗೆ ಮದರಸಾದ ಅಗತ್ಯತೆ ಇಲ್ಲ. ನಕಲಿ ದಾಖಲೆ ಸೃಷ್ಟಿಸಿ ರಸ್ತೆಯಿಂದ 10 ಮೀಟರ್ ದೂರದಲ್ಲಿದೆ ಎಂದು ತೋರಿಸಿದ್ದಾರೆ ಲೈಸನ್ಸ್ ನಲ್ಲಿ ಉಲ್ಲೇಖಿಸಿದ್ದಾರೆ. ಕಾಂಗ್ರೆಸ್ ನ ಏಜೆಂಟರಂತೆ ಇಲಾಖೆ ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ. ನಿಯಮಬಾಹಿರ ಕೆಲಸ ಮಾಡಿದ ಅಧಿಕಾರಿಗಳನ್ನು ಸಸ್ಪೆಂಡ್ ಮಾಡಬೇಕು. ಅನುಮತಿಯನ್ನು ರದ್ದು ಮಾಡದಿದ್ದರೆ ಬೃಹತ್ ಹೋರಾಟ ಸಂಘಟಿಸುತ್ತೇವೆ. ಅಧಿಕಾರಿಗಳಿಗೆ ಮೂರು ದಿನದ ಕಾಲಾವಕಾಶ ಇದೆ. ಹಾವಂಜೆಯ ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರಬೇಡಿ

