ಉಡುಪಿ: ರಾಷ್ಟ್ರೀಯ ಹೆದ್ದಾರಿ 66 ಎಲ್ಪಿಜಿ ಟ್ಯಾಂಕರ್ ಪಲ್ಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ಮುಂದುವರಿದಿದೆ.

ಟ್ಯಾಂಕರ್ ನಿಂದ ಅಡುಗೆ ಅನಿಲ ಸೋರಿಕೆಯಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿಗೆ ಬರುವ ವಾಹನಗಳ ಪಥ ಬದಲಾಯಿಸಿ ಸೂಚನೆ ನೀಡಲಾಗಿದೆ. ಮಂಗಳೂರಿನಿಂದ ಮತ್ತೊಂದು ಟ್ಯಾಂಕರನ್ನು ಪೊಲೀಸರು ಕರೆಸುತ್ತಿದ್ದಾರೆ.

ಮತ್ತೊಂದು ಟ್ಯಾಂಕರ್ ಗೆ ಗ್ಯಾಸ್ ಶಿಫ್ಟ್ ಮಾಡುವ ಮೂಲಕ ಕಾರ್ಯಾಚರಣೆಗೆ ತಯಾರಿ ನಡೆಯುತ್ತಿದೆ. ಸದ್ಯ 3 ಅಗ್ನಿಶಾಮಕ ವಾಹನದಿಂದ ನೀರು ಹಾಯಿಸುವ ಕೆಲಸ ನಡೆಯುತ್ತಿದೆ. ರಾಷ್ಟ್ರೀಯ ಹೆದ್ದಾರಿ ಕಟಪಾಡಿ ಪರಿಸರದಲ್ಲಿ ವಾಹನ ಸಂಚಾರ ಸ್ಥಗಿತಗೊಳಿಸಲಾಗಿದೆ.

View this post on Instagram

A post shared by News Karnataka (@newskarnataka)