ಉಡುಪಿ: ಪ್ರೇಮಿ ಪ್ರದೀಪ್ ಪೂಜಾರಿ ಆತ್ಮಹತ್ಯೆ ಮಾಡಿಕೊಂಡಿದ್ದು, ಪ್ರದೀಪ್ ಪೂಜಾರಿ ಆಡಿಯೋ ಮತ್ತು ಸುಸೈಡ್ ನೋಟ್ ವೈರಲ್ ಆಗಿದೆ. ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರದೀಪ್, ಪ್ರೀತಿಸಿದ ಹುಡುಗಿಯ ಕಡೆಯವರಿಂದ ಗಂಭೀರವಾಗಿ ಗಾಯಗೊಂಡಿದ್ದನು. ಚಿಕಿತ್ಸೆಗಾಗಿ ಉಡುಪಿ ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದನು.
ಹುಡುಗಿಯ ಕಡೆಯಿಂದ ದಾಖಲಾದ ಪ್ರಕರಣದಲ್ಲಿ ಈ ಹಿಂದೆ ಜೈಲು ಸೇರಿದ್ದನು. ಇತ್ತೀಚಿಗಷ್ಟೆ ಜೈಲಿನಿಂದ ಜಾಮೀನು ಪಡೆದು ಹೊರಗೆ ಪ್ರದೀಪ್ ಬಂದಿದ್ದನು. ಇದೇ ವೇಳೆ ಪ್ರದೀಪ್ ಮೇಲೆ ಗಂಭೀರವಾಗಿ ದಾಳಿ ಮಾಡಿರುವ ಆರೋಪ ಕೇಳಿಬಂದಿದೆ.
ಸದ್ಯ ಆತ್ಮಹತ್ಯೆಯ ಬಳಿಕ ಪರವಿರೋಧ ಚರ್ಚೆಯ ನಡುವೆಯೇ ಆಡಿಯೋ ವೈರಲ್ ಕೂಡ ಆಗಿದೆ. ತಾನು ಪ್ರೀತಿಸಿದ ಹುಡುಗಿಗೆ ಕರೆ ಮಾಡಿ ಮಾತನಾಡಿದ್ದ ಪ್ರದೀಪ್ ಪೂಜಾರಿ ಆಡಿಯೋ ವೈರಲ್ ಆಗಿದೆ. ಸಾಯುವ ಮೊದಲು ಬರೆದಿರುವ ಡೆತ್ ನೋಟ್ ಕೂಡ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

