ಉಡುಪಿ: ಪ್ರೇಮ ವೈಫಲ್ಯದಿಂದ ಪೆರ್ಡೂರು ನಿವಾಸಿ ಪ್ರದೀಪ ಪೂಜಾರಿ ಜಿಲ್ಲಾ ಆಸ್ಪತ್ರೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ನಡೆದಿದ್ದು, ಬನ್ನಂಜೆ ನಾರಾಯಣ ಗುರು ಸಭಾಭವನದಲ್ಲಿ ಬಿಲ್ಲವ ಯುವ ವೇದಿಕೆಯಿಂದ ವಿಶೇಷ ಸಭೆ ನಡೆಸಲಾಯಿತು.

ಬಿಲ್ಲವ ಮುಖಂಡರು ಮತ್ತು ಪ್ರದೀಪ್ ಪೂಜಾರಿಯ ಮನೆಯವರು ಉಪಸ್ಥಿತಿ ಇದ್ದರು. ಪ್ರದೀಪ್ ಪೂಜಾರಿ ಸಾವಿನ ನ್ಯಾಯಕ್ಕಾಗಿ ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ ಆಗ್ರಹಿಸಿದೆ. ಸಭೆಯ ಬಳಿಕ ನಿಯೋಗದಿಂದ ಪೊಲೀಸ್ ವರಿಷ್ಠಾಧಿಕಾರಿಗಳನ್ನು ಭೇಟಿ ಮಾಡಲಾಯಿತು. ವೇದಿಕೆ ಜಿಲ್ಲಾಧ್ಯಕ್ಷ ಪ್ರವೀಣ್ ಎಂ ಪೂಜಾರಿ ನೇತೃತ್ವದಲ್ಲಿ ಮನವಿ ಮಾಡಲಾಯಿತು.
ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಯುವವೇದಿಕೆ ಮನವಿ ಸಲ್ಲಿಸಿತು. ನಿಷ್ಪಕ್ಷಪಾತ ಮತ್ತು ಸಮಗ್ರ ತನಿಖೆ ನಡೆಸಬೇಕೆಂದು ಆಗ್ರಹಿಸಿತು. ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳನ್ನು ಶೀಘ್ರ ಬಂಧಿಸಬೇಕು. ವಿಶೇಷ ತಂಡ ರಚಿಸಿ ಕಾರ್ಯಚರಣೆ ಮಾಡಬೇಕು ಎಂದು ಆಗ್ರಹಿಸಿದರು.
ಪೊಲೀಸ್ ಕರ್ತವ್ಯ ಲೋಪದ ಕುರಿತು ತನಿಖೆಯಾಗಬೇಕು. ಸಂತ್ರಸ್ಥರ ದೂರನ್ನು ಯಾಕೆ ಅಧಿಕಾರಿ ಸ್ವೀಕರಿಸಿಲ್ಲ?. ಹಿರಿಯಡ್ಕ ಠಾಣಾಧಿಕಾರಿ ಮತ್ತು ಸಿಬ್ಬಂದಿಯನ್ನು ತನಿಖೆಗೆ ಒಳಪಡಿಸಬೇಕು. ಸಂಬಂಧಪಟ್ಟ ಪೊಲೀಸರನ್ನು ಆರೋಪಿಯನ್ನಾಗಿಸಬೇಕು. ನಿರ್ಲಕ್ಷ್ಯ ಮಾಡಿದರೆ ಜಿಲ್ಲೆಯಾದ್ಯಂತ ಬೃಹತ್ ಪ್ರತಿಭಟನೆಯ ಎಚ್ಚರಿಕೆ ನೀಡಲಾಯಿತು. ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ರಿಜ್ವಾನ್ ಅರ್ಷದ್ ಗೂ ಮನವಿ ಮಾಡಲಾಯಿತು.