ಉಡುಪಿ: ರಾಷ್ಟ್ರೀಯ ಹೆದ್ದಾರಿ 169ಎ ಚತುಷ್ಪಥ ಕಾಮಗಾರಿ ಈಗಿರುವ ರಸ್ತೆಯನ್ನೇ ಅಗಲೀಕರಣಗೊಂಡು ಸಾಗಿದರೆ ಪೆರ್ಡೂರು ಶ್ರೀ ಅನಂತಪದ್ಮನಾಭ ದೇವಸ್ಥಾನದ ಗರ್ಭಗುಡಿ, ರಥಬೀದಿ, ವಾಸ್ತುವಿಗೆ ಸಮಸ್ಯೆಯಾಗುತ್ತದೆ.

ಆದ್ದರಿಂದ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಹಾಗೂ ಪೆರ್ಡೂರಿನ ನಾಗರಿಕರು ಪ್ರಸ್ತಾಪಿಸಿರುವಂತೆ ಹೆದ್ದಾರಿ ಬೈಪಾಸ್ ಮೂಲಕವೇ ಸಾಗಬೇಕು ಎಂದು ಪೆರ್ಡೂರು ಶ್ರೀ ಅನಂತಪದ್ಮನಾಭ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ತಾಂತ್ರಿಕ ಸಲಹೆಗಾರ ಸಂತೋಷ್ ಕುಲಾಲ್ ಪಕ್ಕಾಲು ಆಗ್ರಹಪಡಿಸಿದರು.

ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಿರುವ ರಸ್ತೆಯೇ ಅಗಲೀಕರಣಗೊಂಡರೆ ಸುಮಾರು 45 ಕಟ್ಟಡಗಳನ್ನು ತೆರವು ಮಾಡಬೇಕಾಗುತ್ತದೆ. ಸುಮಾರು 9 ಕೋಟಿಯಷ್ಟು ಪರಿಹಾರ ನೀಡಬೇಕಾಗಬಹುದು. ಆದರೆ ಹೆದ್ದಾರಿ ಬೈಪಾಸ್ ಮೂಲಕ ಸಾಗಿದರೆ 4 ಕಟ್ಟಡಗಳಷ್ಟೇ ತೆರವು ಮಾಡಬೇಕಾಗಿ ಬರಬಹುದು.

ಅಲ್ಲದೆ 4 ಕೋಟಿಯಷ್ಟು ಪರಿಹಾರ ಕೊಡಬೇಕಾಗಿ ಬರಬಹುದು. ಈ ಬಗ್ಗೆ ನಾವು ನಕಾಶೆಯನ್ನು ಸಿದ್ಧಪಡಿಸಿ ಈಗಾಗಲೇ ಪಿಡಬ್ಲ್ಯೂಡಿಗೆ ನೀಡಿದ್ದೇವೆ. ನಮ್ಮೆಲ್ಲರ ಆಗ್ರಹ ರಾ.ಹೆ. ಬೈಪಾಸ್ ಮೂಲಕವೇ ಸಾಗಲಿ ಎಂಬುದಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.

View this post on Instagram

A post shared by News Karnataka (@newskarnataka)