ಮಣಿಪಾಲ:  ಕೊರಗ ಸಮುದಾಯದ ಯುವಜನರಿಗೆ ಉದ್ಯೋಗ ಹಾಗೂ ಕ್ರಷಿ ಭೂಮಿ ಹಕ್ಕು ಪತ್ರ ಮಂಜೂರಾತಿಗಾಗಿ ಒತ್ತಾಯಿಸಿ ಕೊರಗಾಭಿವ್ರದ್ಧಿ ಸಂಘಗಳ ಒಕ್ಕೂಟದ ವತಿಯಿಂದ ಆಯೋಜಿಸಲಾಗಿದ್ದ ಧರಣಿ ಸತ್ಯಾಗ್ರಹ ಇಂದು ಶನಿವಾರ 6ನೇ ದಿನಕ್ಕೆ ಕಾಲಿಟ್ಟಿದೆ.

ಇನ್ನೂ ಧರಣಿಯ ಅಧ್ಯಕ್ಷರಾದ ಸುಶೀಲ ನಡ ಅವರು ಮಾತನಾಡಿ, ” ಅಜಲು, ಅಸ್ಪ್ರಶ್ಯತೆ ಕಾರಣದಿಂದ ಶಿಕ್ಷಣ, ಆರೋಗ್ಯದಿಂದ ವಂಚಿತರಾಗಿ ಕಳೆದ 30 ವಷ೯ಗಳಿಂದ ಸಂಘಟನೆಯ ಶಿಕ್ಷಣ ಕ್ರಾಂತಿಯಿಂದ ಇಂದು ಸಮುದಾಯದ ಯುವಜನರು ಶಿಕ್ಷಣ ಪಡೆದರೂ ಉದ್ಯೋಗವಿಲ್ಲದೆ, ಮಾನಸಿಕ ಒತ್ತಡ ಅನುಭವಿಸುತಿದ್ದಾರೆ, ಎಲ್ಲಾ ರೀತಿಯ ಪದವಿ, ಕೋರ್ಸ್‌ಗಳನ್ನು ಪೂರ್ಣಗೊಳಿಸಿದರು ನಮ್ಮ ಸಮುದಾಯದ ಯುವಜನತೆಗೆ ಉದ್ಯೋಗದಿಂದ ವಂಚಿತರಾಗುತ್ತಿದ್ದಾರೆ ಹಾಗಾಗಿ ಆದಷ್ಟು ಬೇಗ ಮುಖ್ಯಮಂತ್ರಿ ಅವರಲ್ಲಿಗೆ ತಮ್ಮತಂಡವನ್ನು ಕರೆಸಿಕೊಂಡು ತಮ್ಮ ಬೇಡಿಕೆಗಳನ್ನು ಈಡೆರಿಸಬೇಕು , ಇದಕ್ಕೆ ಪರಿಹಾರ ದೊರಕುವ ವರೆಗೂ ಧರಣಿ ಮುಂದು ವರೆಸುತ್ತೇವೆ  ಹಾಗಾಗಿ ಸರಕಾರ ಕೂಡಲೇ ನಮ್ಮ ಬೇಡಿಕೆ ಈಡೇರಿಕೆಗೆ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.