ಉಡುಪಿ : ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆ ಸೇರಿದಂತೆ ಕೊಂಕಣದ ಹಲವು ಭಾಗಗಳಲ್ಲಿ ಭಾರಿ ಮಳೆಯಿಂದ ಸಮಸ್ಯೆಗಳು ಎದುರಾಗಿದ್ದು 14 ಗಂಟೆಗಳ ಕಾಲ ಹಲವು ರೈಲುಗಳನ್ನು ರದ್ದುಗೊಳಿಸಲಾಗಿದೆ. ಇದರಿಂದ ಕರ್ನಾಟಕ ರಾಜ್ಯದ ರೈಲು ಪ್ರಯಾಣಿಕರಿಗೂ ಸಮಸ್ಯೆ ಎದುರಾಗಿದೆ.

ಮಂಗಳೂರು ಎಕ್ಸ್‌ಪ್ರೆಸ್, ಕೊಂಕಣ ಕನ್ಯಾ ಎಕ್ಸ್‌ಪ್ರೆಸ್, ತುಟಾರಿ ಎಕ್ಸ್‌ಪ್ರೆಸ್, ಜನಶತಾಬ್ದಿ ಎಕ್ಸ್‌ಪ್ರೆಸ್, ದಿವಾ ಸಾವಂತವಾಡಿ ಎಕ್ಸ್‌ಪ್ರೆಸ್, ಸಾವಂತವಾಡಿ ಮಡಗಾಂವ್ ಪ್ಯಾಸೆಂಜರ್ ರೈಲು ಸೇವೆ ನಿಂತಿದೆ. ಇನ್ನು ಕರಾವಳಿ ಭಾಗದ 12134 ಸೂಪರ್ ಎಕ್ಸ್‌ಪ್ರೆಸ್ ಛತ್ರಪತಿ ಶಿವಾಜಿ ಮುಂಬೈ ಟರ್ಮಿನಲ್ ರೈಲು ಕ್ಯಾನ್ಸಲ್ ಆಗಿದೆ. 12620 ಮತ್ಸ್ಯ ಗಂಗಾ ಮಂಗಳೂರು ಟು ಮುಂಬೈ ರೈಲು ಕ್ಯಾನ್ಸಲ್ ಆಗಿದೆ.