ಉಡುಪಿ: ಉಡುಪಿಯ ಯಕ್ಷಗಾನ ಕಲಾರಂಗ ಸಂಸ್ಥೆಯ ಸುವರ್ಣ ಸಡಗರ ಕಾರ್ಯಕ್ರಮದಲ್ಲಿ, ಯಕ್ಷಗಾನ ಕಲಾವಿದರ ಸಮಾವೇಶ ನಡೆಯಿತು. ಈ ಸಮಾವೇಶದಲ್ಲಿ ಯಕ್ಷಗಾನ ಕಲಾವಿದರಿಗೆ ಅಧ್ಯಯನ ಯೋಗ್ಯವಾದ ಕೂಡಿಯಾಟ್ಟಂ ಪ್ರದರ್ಶನ ನಡೆಯಿತು.
ತ್ರಿಶೂರ್ ನ ಮಾಧವ ಮಾತೃ ಗ್ರಾಮ ತಂಡದ ಕಲಾವಿದರು ಪ್ರದರ್ಶನ ನಡೆಸಿದರು. ಸೀತಾಪಹರಣಂ ಮತ್ತು ಜಟಾಯುವಧಂ ಪ್ರಸಂಗಗಳ ಪ್ರದರ್ಶನ ಏರ್ಪಾಟ್ಟಾಗಿತ್ತು. ಕೇರಳದ ಅತ್ಯಂತ ಪುರಾತನ ಕಲೆ ಕೂಡಿಯಾಟ್ಟಂಗೂ ಯಕ್ಷಗಾನಕ್ಕೂ ಅನೇಕ ಸಾಮ್ಯತೆಗಳಿವೆ.
ಈ ಸಾಮ್ಯತೆಗಳನ್ನು ಮನಗಂಡು ಯಕ್ಷಗಾನದ ಪ್ರದರ್ಶನಗಳ ಗುಣಮಟ್ಟ ಹೆಚ್ಚಿಸುವ ದೃಷ್ಟಿಯಿಂದ ಈ ಪ್ರದರ್ಶನ ಏರ್ಪಡಿಸಲಾಗಿತ್ತು. ನೃತ್ಯ ಹಾಗೂ ಸಂಗೀತದ ಅನೇಕ ಅಂಶಗಳು ಯಕ್ಷಗಾನ ಕಲಾವಿದರಿಗೆ ಪ್ರೇರಣದಾಯಕವಾಗಿತ್ತು. ಉಡುಪಿ ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ನಡೆದ ಈ ಪ್ರದರ್ಶನವನ್ನು ನೂರಾರು ಯಕ್ಷಗಾನ ಕಲಾವಿದರು ವೀಕ್ಷಿಸಿದರು.

