ಉಡುಪಿ : ಕಾಪು ಮಾರಿಗುಡಿ ದೇವಸ್ಥಾನಕ್ಕೆ ಹೆಚ್ ಡಿ ಕುಮಾರಸ್ವಾಮಿ ಭೇಟಿ ನೀಡಿದರು. ಅನಿತಾ ಕುಮಾರಸ್ವಾಮಿ, ನಿಖಿಲ್ ದಂಪತಿಗಳ ಜೊತೆ ಮಾರಿಗುಡಿಗೆ ಭೇಟಿ ನೀಡಿದರು.

ಮಾರಿಯಮ್ಮ ಉಚ್ಚಂಗಿ ದೇವಿಯರ ದರ್ಶನವನ್ನು ಹೆಚ್ ಡಿಕೆ ಪಡೆದರು. ಕೊಲ್ಲೂರಿನಿಂದ ಉಡುಪಿಯ ಕಾಪು ಮಾರಿಯಮ್ಮ ಕ್ಷೇತ್ರಕ್ಕೆ ಕುಮಾರಸ್ವಾಮಿ ಭೇಟಿ ನೀಡಿ ಪೂಜೆ ಸಲ್ಲಿಸಿದರು. ದೇವಸ್ಥಾನದಲ್ಲಿ ಕುಟುಂಬದ ಸದಸ್ಯರ ಜೊತೆಯಲ್ಲಿ ಗಂಟೆ ನಾದ ಸೇವೆಯನ್ನು ಕುಮಾರಸ್ವಾಮಿ ನೀಡಿದರು.

ಕ್ಷೇತ್ರದ ತಂತ್ರಿ ಕೆ ಪಿ ಕುಮಾರಗುರು ಅವರಿಂದ ಅನುಗ್ರಹ ಪ್ರಸಾದವನ್ನು ಹೆಚ್ ಡಿಕೆ ಸ್ವೀಕರಿಸಿದರು. ಜೆ ಡಿ ಎಸ್ ಮುಖಂಡರಾದ ಭೋಜೆ ಗೌಡ, ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ, ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಮಾಜಿ ಶಾಸಕ ಮೊಯ್ದೀನ್ ಬಾವ, ಕಾಪು ಮಾರಿಗುಡಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ವಾಸುದೇವ ಶೆಟ್ಟಿ ಸೇರಿದಂತೆ ಅನೇಕರು ಭಾಗಿಯಾದರು.