ಉಡುಪಿ: ನ್ಯಾಷನಲ್ ಹೆರಾಲ್ಡ್ ಜಾಹೀರಾತು ವಿವಾದದ ಕುರಿತು ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ, ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿಕೆ ನೀಡಿದ್ದಾರೆ. ನ್ಯಾಷನಲ್ ಹೆರಾಲ್ಡ್ ಗೆ ಜಾಹೀರಾತು ನೀಡಿರುವುದು ತಪ್ಪು. ಸರಕಾರದ ಹಣ ಉಪಯೋಗಿಸುವುದು ಅಕ್ಷೇಪಾರ್ಹ ಎಂದರು.
ಹೆರಾಲ್ಡ್ ಪತ್ರಿಕೆಯ ಬಗ್ಗೆ ಸುಪ್ರೀಂಕೋರ್ಟಿನಲ್ಲಿದೆ. ಸೋನಿಯಾ ಗಾಂಧಿ ರಾಹುಲ್ ಗಾಂಧಿ ಈ ಪ್ರಕರಣದಲ್ಲಿ ಜಾಮೀನಿನಲ್ಲಿದ್ದಾರೆ. ನ್ಯಾಯಾಲಯದಲ್ಲಿ ಇರುವಂತ ಪತ್ರಿಕೆ ಜನಸಾಮಾನ್ಯರ ನಡುವೆ ಇಲ್ಲದಿರುವಂತ ಪತ್ರಿಕೆ. ಆ ಪತ್ರಿಕೆಗೆ ಒಂದುವರೆ ಕೋಟಿ ಜಾಹೀರಾತು ನೀಡಿದ್ದಾರೆ ಎಂದರು.
ಕೊಟ್ಟಿರುವುದು ಸರ್ಕಾರದ ಹಣ ಡಿಕೆಶಿ ಹಣ ಕೊಟ್ಟರೆ ನಾವು ಕೇಳಲ್ಲ. ಸಿದ್ದರಾಮಯ್ಯನವರು ಹಣ ಕೊಟ್ಟರೆ ನಾವು ಕೇಳಲ್ಲ. ಡಿಕೆಶಿ ಬೇಕಾದರೆ 100 ಕೋಟಿ ಕೊಡಲಿ ನಾವು ಕೇಳಲ್ಲ, ಕರ್ನಾಟಕ ಸರಕಾರದ ಹಣ ಅದು ಕಾಂಗ್ರೆಸ್ನ , ಸಿದ್ದರಾಮಣ್ಣ , ಡಿಕೆಶಿಯ ಹಣ ಅಲ್ಲ. ಈ ರಾಜ್ಯದ ಜನತೆಯ ಹಣ ಎಂದರು.

